ಕಠಿಣ ಪರಿಶ್ರಮದಿಂದ ಗುರಿ ಮುಟ್ಟಲು ಸಾಧ್ಯ

3Itagi1
Published on

ಇಟಗಿ: ಕಠಿಣ ಪರಿಶ್ರಮ, ಶಿಸ್ತು ಮತ್ತು ಸಮಯ ಪಾಲನೆ ಮೂಲಕ ಉನ್ನತ ಗುರಿ ಸಾಧಿಸಲು ಸಾಧ್ಯ ಎಂದು ಖಾನಾಪುರ ಪಿಎಸ್​ಐ ಎಂ.ಬಿ.ಬಿರಾದಾರ ಹೇಳಿದರು.

ಸಮೀಪದ ಪಾರಿಶ್ವಾಡ ಗ್ರಾಮದ ಹನಿವೆಲ್​ ಇಂಟರನ್ಯಾಷನಲ್​ ಶಾಲೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ 2025&26ನೇ ಸಾಲಿನ ವಿದ್ಯಾರ್ಥಿಗಳ ಪದವಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.

ಜಗತ್ತಿನಲ್ಲಿ ಶಿಣದ ಪಾತ್ರ ಅತಿ ಮುಖ್ಯವಾಗಿದ್ದು, ಈ ನಿಟ್ಟಿನಲ್ಲಿ ಶಾಲಾ ಆಡಳಿತ ಮಂಡಳಿ ಗ್ರಾಮೀಣ ಭಾಗದಲ್ಲಿ ಇಂತಹ ಸುಸಜ್ಜಿತ ವಾತಾವರಣದಲ್ಲಿ ಗುಣಮಟ್ಟದ ಶಿಣ ನೀಡುತ್ತಿರುವುದು ಶ್ಲಾನೀಯ ಎಂದರು.

ಪ್ರಾಚಾರ್ಯ ಡಾ.ಅನಿಲಕುಮಾರ ಬೆಣಗಿ ಮಾತನಾಡಿ, ಮಕ್ಕಳ ಸರ್ವತೋಮುಖ ಅಭಿವದ್ಧಿಗಾಗಿ ಮಕ್ಕಳ ಆಸಕ್ತಿ ಅರಿತು ಕೌಶಲ ಅಭಿವದ್ಧಿಗಾಗಿ ನಿರಂತರ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳನ್ನು ಅರ್ಥಪೂರ್ಣವಾಗಿ ನಡೆಸುತ್ತಿರುವುದಾಗಿ ತಿಳಿಸಿದರು.

ನಿರ್ದೇಶಕರಾದ ಶಿವಾನಂದ ಪಾಟೀಲ, ಶಿವಾನಂದ ಗುದ್ಲಿ ಹಾಗೂ ಬಾಬುಸಾಹೇಬ್​ ತಳಗಡೆ, ಪಾಂಡುರಂಗ ನಿಲಜಕರ, ಸಚಿನ ಮರಕಟ್ಟಿ ಮತ್ತು ಸಿಬ್ಬಂದಿ ಇದ್ದರು. ಶ್ರೀಕಾಂತ ಗಣಾಚಾರಿ ಪರಿಚಯಿಸಿದರು. ಉಜ್ಮಾ ನಾಯಕ ನಿರೂಪಿಸಿದರು. ವಿಜಯಾ ಪೂಜಾರಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net