ಸತ್ಕಾರ್ಯಗಳಿಂದ ಜೀವನ ಸಾರ್ಥಕ

19ndr1
Published on

ನಂದೇಶ್ವರ: ಶ್ರೀ ರಾಮನ ಭಕ್ತ ಹನುಮಂತನು ರಾಮಾಯಣದ ಸಂದರ್ಭದಲ್ಲಿ ಸತ್ಕಾರ್ಯ ಮಾಡಿದ್ದರ ಫಲವಾಗಿ ಎಲ್ಲ ಗ್ರಾಮಗಳ ಭಕ್ತರ ಹೃದಯದಲ್ಲಿ ಶಾಶ್ವತ ನೆಲೆಸಿದ್ದಾನೆ. ಪ್ರತಿಯೊಬ್ಬರೂ ಪರಿಶುದ್ಧ ಮನಸ್ಸಿನಿಂದ ಸತ್ಕಾರ್ಯ ಮಾಡಬೇಕೆಂದು ಬಂಡಿಗಣಿ ನೀಲಮಾಣಿಕ ಮಠದ ಚಕ್ರವರ್ತಿ ಅನ್ನದಾನೇಶ್ವರ ಸ್ವಾಮೀಜಿ ಹೇಳಿದರು.

ಗ್ರಾಮದ ಶ್ರೀ ಹನುಮಾನ ದೇವರ ರಥೋತ್ಸವ ಅಂಗವಾಗಿ ಶನಿವಾರ ಜರುಗಿದ ಶಿವಾನುಭವ ಗೋಷ್ಠಿ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದರು. ನಂದೇಶ್ವರ ಗ್ರಾಮದ ಮಧುರಖಂಡಿ ಕಮರಿಮಠದ ಡಾ. ದುಂಡೇಶ್ವರ ಸ್ವಾಮೀಜಿ ನಿರಂತರವಾಗಿ ಕಾಯಕ ದಾಸೋಹ ಸೇವೆ ಸಲ್ಲಿಸುತ್ತ ಜನರಲ್ಲಿ ಸಂಸ್ಕಾರ ಸಂಸ್ಕೃತಿ ಬೆಳೆಸುವ ಮೂಲಕ ಗ್ರಾಮದ ಕೀರ್ತಿ ಹೆಚ್ಚಿಸಿದ್ದಾರೆ ಎಂದರು.

ಸುರೇಶಗೌಡ ಪಾಟೀಲ, ರಾಮಣ್ಣ ಪರಟಿ, ಡಾ. ಪಿ.ಬಿ. ಬಾಗೇವಾಡಿ, ಶ್ರೀಶೈಲ ಹನಗಂಡಿ, ಬುಜಬಲ್ಲಿ ಪರಟಿ, ಸತ್ಯಪ್ಪ ಬಳವಾಡ, ಉಮೇಶ ಗಂಜಾಳಿ, ಅದೃಶ್ಯ ಪಾಟೀಲ, ಹನುಮಂತ ಚಂಡಿಕಿ, ಎಸ್.ಬಿ. ಲಾಲಸಿಂಗಿ ಇದ್ದರು. ಬಂಡಿಗಣಿ ಮಠದಿಂದ ನಂದೇಶ್ವರ ಗ್ರಾಮಸ್ಥರಿಗೆ ಅನ್ನ ದಾಸೋಹ ವ್ಯವಸ್ಥೆ ಕಲ್ಪಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net