ಸಂಭ್ರಮ ಸಡಗರದಿಂದ ಮೊಹರಂಗೆ ತೆರೆ

07 manju 05
ಹೊಸಪೇಟೆ ತಾಲೂಕಿನ ಕಮಲಾಪುರದಲ್ಲಿ ಪೀರಲ ದೇವರ ಮೆರವಣಿಗೆ ನಡೆಯಿತು.
Published on

ಹೊಸಪೇಟೆ: ತಾಲೂಕಿನ ಕಮಲಾಪುರ ಸೇರಿದಂತೆ ವಿವಿಧ ಕಡೆ ಮೊಹರಂ ದೇವರು(ಪೀರಲದೇವರು)ಗಳನ್ನು ಕರ್ಬಲ್‌ಗೆ ಕಳುಹಿಸಿಕೊಡುವ ಮೂಲಕ ಸೋಮವಾರ ಮೊಹರಂ ಹಬ್ಬಕ್ಕೆ ತೆರೆಬಿತ್ತು.

ಕಳೆದ 11 ದಿನಗಳಿಂದ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಹಿಂದು-ಮುಸ್ಲಿಮರು ಭಾನುವಾರ ರಾತ್ರಿ ವಿಶೇಷ ಪೂಜೆ ಸಲ್ಲಿಸಿದರು. ಅಲಾಯಿ ಕುಣಿಗೆ ಉಪ್ಪು ಹಾಗೂ ದಾರವನ್ನು ಹಾಕಿ ತಮ್ಮ ಹರಕೆ ತೀರಿಸಿದರೆ, ಸೋಮವಾರ ಬೆಳಗಿನ ಜಾವ ಪೀರಲ ದೇವರುಗಳು ಅಗ್ನಿ ಪ್ರವೇಶ ಮಾಡಿದವು.

ಬೆಳಗ್ಗೆ ಮೆರವಣಿಗೆಗೆ ಬಂದು ದೇವರುಗಳು ಮುಖಾ ಮುಖಿಯಾದವು. ಸಂಜೆ 4 ಗಂಟೆಯಿಂದ 6 ಗಂಟೆವರೆಗೆ ದೇವರ ಮೆರವಣಿಗೆ ನಡೆಯಿತು. ಈ ದೃಶ್ಯ ನೋಡಲು ಇಲ್ಲಿನ ಮುಖ್ಯ ರಸ್ತೆಯಲ್ಲಿ ಸಾವಿರಾರು ಜನರು ನೆರೆದಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net