ಪ್ರೋತ್ಸಾಹದಿಂದ ಹೆಚ್ಚಲಿದೆ ಆತ್ಮಸ್ಥೈರ್ಯ

Kurgodu School
ಕುರುಗೋಡಿನ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ ಹೆಚ್ಚು ಅಂಕಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಮುಖ್ಯಶಿಕ್ಷಕ ಬಿ.ಶ್ರೀಕಾಂತ್, ಸ್ಥಳದಾನಿ ತಾಡಿಪತ್ರಿ ಶ್ರೀರಾಮ್, ಶಿಕ್ಷಕರಾದ ಚಿನ್ನಬೋರ ನಾಯಕ, ಕೃಷ್ಣಯ್ಯ, ಆನಂದ ಇದ್ದರು.
Published on

ಕುರುಗೋಡು: ಮಕ್ಕಳನ್ನು ಪ್ರೋತ್ಸಾಹಿಸುವುದರಿಂದ ವಿದ್ಯಾರ್ಥಿಗಳಲ್ಲಿ ಸಾಧಿಸುವ ಆತ್ಮಸ್ಥೈರ್ಯ ಹೆಚ್ಚುತ್ತದೆ ಎಂದು ಪ್ರಭಾರ ಮುಖ್ಯಶಿಕ್ಷಕ ಬಿ.ಶ್ರೀಕಾಂತ್ ಅಭಿಪ್ರಾಯಪಟ್ಟರು.

ಪಟ್ಟಣದ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಗುರುವಾರ ಸ್ಥಳ ದಾನಿಗಳಿಂದ ನಗದು ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಹೆಚ್ಚು ಅಂಕ ಪಡೆದು ವಿದ್ಯಾರ್ಥಿಗಳನ್ನು ಗುರುತಿಸಿ ಗೌರವಿಸಿದರೆ ಇತರ ವಿದ್ಯಾರ್ಥಿಗಳಿಗೂ ಸಾಧನೆ ಮಾಡಲು ಪ್ರೇರಣೆಯಾಗುತ್ತದೆ ಎಂದರು.

ಸ್ಥಳದಾನಿ ತಾಡಿಪತ್ರಿ ಶ್ರೀರಾಮ್ ಮಾತನಾಡಿ, ನಮ್ಮ ತಾತ ತಾಡಿಪತ್ರಿ ಸುಬ್ಬರಾವ್ ಅವರು ಹೈಕೋರ್ಟ್ ನ್ಯಾಯಾಧೀಶರಾಗಿದ್ದರು. ಅವರಿಗೆ ಶಿಕ್ಷಣ ಕ್ಷೇತ್ರದ ಬಗ್ಗೆ ಅಪಾರ ಅಭಿಮಾನ ಮತ್ತು ಗೌರವ ಇತ್ತು. ಹೀಗಾಗಿ ಅವರ ಸ್ಮರಣಾರ್ಥ ಶಾಲೆಗೆ ಸ್ಥಳ ದಾನವಾಗಿ ನೀಡಲಾಗಿದೆ. ಅಲ್ಲದೆ ಹೆಚ್ಚು ಅಂಕಪಡೆದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡಿ ಪ್ರೋತ್ಸಾಹಿಸಲಾಗುತ್ತಿದೆ ಎಂದರು.

ಎಸ್ಸೆಸ್ಸೆಲ್ಸಿಯಲ್ಲಿ ಹೆಚ್ಚು ಅಂಕ ಪಡೆದ ರೇವತಿ, ಕೆ.ಪವಿತ್ರಾ, ಕೆ.ಎನ್.ಪೂರ್ಣಿಮಾ ಮತ್ತು ಗಾಯಿತ್ರಿ ಅವರಿಗೆ ಬಹುಮಾನ ವಿತರಿಸಲಾಯಿತು. ಶಿಕ್ಷಕರಾದ ಚಿನ್ನಬೋರ ನಾಯಕ, ಕೃಷ್ಣಯ್ಯ, ಆನಂದ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net