

ಐಗಳಿ: ವಿದ್ಯಾರ್ಥಿಗಳು ವಿವಿಧ ಚಟುವಟಿಕೆಗಳಲ್ಲಿ ಪಾಲ್ಗೊಂಡು ಸರ್ವತೋಮುಖ ಬೆಳವಣಿಗೆ ಹೊಂದಲು ಶ್ರಮವಹಿಸಬೇಕು ಎಂದು ಮುಖಂಡ ಸಿ.ಎಸ್. ನೇಮಗೌಡ ಹೇಳಿದರು.
ಐಗಳಿ ಕ್ರಾಸ್‌ನ ಮಾಣಿಕ ಪ್ರಭು ಸಭಾಭವನದಲ್ಲಿ ಶನಿವಾರ ತೆಲಸಂಗದ ಮಲ್ಲಪ್ಪ ಖ್ಯಾಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಿಂದ ಏರ್ಪಡಿಸಿದ್ದ ವಾರ್ಷಿಕ ವಿಶೇಷ ಸೇವಾ ಶಿಬಿರ ಉದ್ಘಾಟಿಸಿ ಮಾತನಾಡಿದರು. ವಿದ್ಯೆಯೊಂದಿಗೆ ಸಂಸ್ಕಾರ ಅಗತ್ಯ ಎಂದರು.
ತೆಲಸಂಗ ಹಿರೇಮಠದ ವೀರೇಶ್ವರ ದೇವರು ಮಾತನಾಡಿ, ಉತ್ತಮ ಪ್ರಜೆಗಳಾಗಿ ಸುಂದರ ಬದುಕು ಸಾಗಿಸಲು ಶಿಕ್ಷಣ ಅವಶ್ಯ ಎಂದರು. ತೆಲಸಂಗ ಕಾಲೇಜಿನ ಪ್ರಾಚಾರ್ಯ ಶಿವಾನಂದ ಹಾಲೊಳ್ಳಿ ಅಧ್ಯಕ್ಷತೆ ವಹಿಸಿದ್ದರು. ಮಾಣಿಕಪ್ರಭು ಶಿಕ್ಷಣ ಸಂಸ್ಥೆ ಅಧ್ಯಕ್ಷ ಪ್ರಹ್ಲಾದ ಪಾಟೀಲ, ಆರ್.ಆರ್.ತೆಲಸಂಗ, ಬಸಗೌಡ ಬಿರಾದಾರ, ಮಲಗೌಡ ಪಾಟೀಲ, ಎ.ಎಸ್.ಪಾಟೀಲ, ಭೈರಪ್ಪ ಬಿಜ್ಜರಗಿ, ಬಸವರಾಜ ಬಿರಾದಾರ, ಸುರೇಶ ಬಿಜ್ಜರಗಿ, ಅಪ್ಪು ಜಮಾದಾರ, ಹನುಮಂತ ಕರಿಗಾರ ಇತರರಿದ್ದರು. ಡಾ.ಹಣಮಂತರಾಯ ಸ್ವಾಗತಿಸಿದರು. ಕೆ.ಎಸ್.ಬಿಜ್ಜರಗಿ ನಿರೂಪಿಸಿದರು.