ಶ್ರದ್ಧೆಭಕ್ತಿಗಳಿಂದ ನಡೆದ ಮೊಹರಂ ಸಂಭ್ರಮ

6 KMP 01
ಕಂಪ್ಲಿಯ 19ನೇವಾರ್ಡ್ ತಳವಾರ ಓಣಿಯ ಬಪ್ಪಾಜಿ ತಾತನ ಕುದುರೆ ಹಿಡಿದಿದ್ದ ಮುಜಾವರ ಪಕ್ಕೀರಪ್ಪತಾತ ಅಗ್ನಿಕುಂಡ ಹಾಯ್ದು ಭಕ್ತಿ ಅರ್ಪಿಸಿದರು.
Published on

ಕಂಪ್ಲಿ: ತಾಲೂಕಿನಲ್ಲಿ ಮೊಹರಂ ಕತ್ತಲರಾತ್ರಿ ನಿಮಿತ್ತ ಅಲಾಯಿ ಕುಣಿಯಲ್ಲಿ ಅಗ್ನಿಕೆಂಡ ಹಾಯುವ ಕಾರ್ಯಕ್ರಮ ಶನಿವಾರ ತಡರಾತ್ರಿ ಶ್ರದ್ಧೆಭಕ್ತಿಯಿಂದ ನಡೆದವು. ಸುಗ್ಗೇನಹಳ್ಳಿ ಗ್ರಾಮದ ಮೊಹರಂ ಹಬ್ಬದ ಕತ್ತಲರಾತ್ರಿ ಆಚರಣೆಯಲ್ಲಿ ಮೌಲಾಲಿ ತಾತ ಮೂರು ಪಾಸೇವು(ಕಾರಣಿಕ)ನುಡಿಗಳನ್ನು ನುಡಿದಿದ್ದು ರೈತಾಪಿ ವಲಯದಲ್ಲಿ ಚರ್ಚೆಯಾಗುತ್ತಿದೆ. ತಾಲೂಕಿನ ಎರಡು ಕಡೆಗಳಲ್ಲಿ ಅಗ್ನಿಕುಂಡ ಹಾಯುವಾಗ ಮೂವರು ಆಯತಪ್ಪಿ ಬಿದ್ದು ಗಾಯಗೊಂಡಿದ್ದಾರೆ.

ಕತ್ತಲರಾತ್ರಿಯ ಅಲಾಯಿಕುಣಿ ಹಾಯುವಾಗ ಮೌಲಾಲಿತಾತನ ಕುದುರೆ ಹಿಡಿದಿದ್ದ ರಫಿಕ್ ತಾತನು ನರ ಮಾನವರಿಗೆ ದುರ್ಮರಣ ಹೆಚ್ಚಾಯಿತು ಎಂದು ನುಡಿದಿದ್ದು, ಅಪಘಾತ ದಿಢೀರ್ ಸಾವುನೋವು ಹೆಚ್ಚಾಗುವವು ಎಂದೂ, ದೈವದ ಮಳೆ ದೈವದ ಬೆಳೆ ನುಡಿಗೆ ನ್ಯಾಯ ನೀತಿ, ಧರ್ಮಕ್ಕೆ ತಕ್ಕ ಮಳೆ ಬೆಳೆ ಎಂದೂ, ಬಿಳಿ ಕುದುರೆ ಆಕಾಶಕ್ಕೆ ಹಾರಿತು ಕೆಂಪು ಕುದುರೆಗೆ ಬಲತ್ಕಾರ ಕಡಿಮೆಯಾಯಿತು ಎನ್ನುವ ನುಡಿಗೆ ಅಕ್ಕಿ, ಹತ್ತಿ ದರ ಏರಿಕೆ ಕಂಡು ಮೆಣಸಿನಕಾಯಿ ದರ ಕಡಿಮೆಯಾಗಲಿದೆ ಎಂಬುದು ರೈತಾಪಿ ವರ್ಗದಲ್ಲಿ ಕೇಳಿ ಬರುತ್ತಿದೆ.

ಪೀರಲು ದೇವರು ಸ್ಥಾಪನೆ: ತಾಲೂಕಿನ ಗೋನಾಳ್ ಗ್ರಾಮದಲ್ಲಿ ಮೊಹರಂ ಹಬ್ಬ ಆಚರಣೆ ನಿಷೇಧವಿದ್ದು, ಉಳಿದಂತೆ ತಾಲೂಕಿನ 38 ಕಡೆಗಳಲ್ಲಿ ಪೀರಲು ದೇವರುಗಳನ್ನು ಸ್ಥಾಪಿಸಿದೆ. ಶನಿವಾರ ಕತ್ತಲುರಾತ್ರಿ ಆಚರಿಸಿದ್ದು ಭಾನುವಾರ ಮೊಹರಂ ಕೊನೆಯ ದಿನದಂದು 37 ಪೀರಲು ದೇವರ ಮೆರವಣಿಗೆ ನಡೆಯಲಿದೆ. ಉಪ್ಪಾರಹಳ್ಳಿ ಗ್ರಾಮದಲ್ಲಿ ಮಾತ್ರ ಸೋಮವಾರ ಮೊಹರಂ ಕೊನೆಯ ದಿನವಾಗಿದ್ದು ಪೀರಲು ದೇವರ ಮೆರವಣಿಗೆ ನಡೆಯಲಿದೆ.

ತಾಲೂಕಿನ ನಂ.2ಮುದ್ದಾಪುರದಲ್ಲಿ ಆಲಾಯಿ ಕುಣಿಯಲ್ಲಿ ಅಗ್ನಿ ಹಾಯುವಾಗ ಗ್ರಾಪಂ ಮಾಜಿ ಅಧ್ಯಕ್ಷ ಭಾಸ್ಕರರೆಡ್ಡಿ ಆಯ ತಪ್ಪಿ ಬಿದ್ದು ಕಾಲುಗಳು ಗಾಯಗೊಂಡ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಬಳ್ಳಾರಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಾಮಸಾಗರದಲ್ಲಿ ಆಲಾಯಿಕುಣಿ ಹಾಯುವಾಗ ಕಟ್ಟಿಗೆ ಸರಿಸಲು ಹಾಕಿದ್ದ ಚೈನ್ ತಗುಲಿ ಎ.ಮಲ್ಲಯ್ಯ, ಜಗದೀಶ್ ಇಬ್ಬರು ಆಯ ತಪ್ಪಿ ಬಿದ್ದು ಗಾಯಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net