ಸಹಕಾರದಿಂದ ಬಸವೇಶ್ವರ ಬ್ಯಾಂಕ್​ ಪ್ರಗತಿ

30 Jaggu 7
Published on

ಬೆಳಗಾವಿ: ಆಡಳಿತ ಮಂಡಳಿಯ ಪಾರದರ್ಶಕ ನಿರ್ವಹಣೆ ಹಾಗೂ ಸಿಬ್ಬಂದಿ ಸೇವಾ ನಿಷ್ಠೆಯಿಂದ ಬೆಳಗಾವಿ ಬಸವೇಶ್ವರ ಸಹಕಾರಿ ಬ್ಯಾಂಕ್​ ಪ್ರಗತಿ ಹೊಂದುತ್ತಿದೆ ಎಂದು ಕಾರಂಜಿಮಠದ ಗುರುಸಿದಟಛಿ ಸ್ವಾಮೀಜಿ ಹೇಳಿದರು.

ಶಹಾಪುರ ಸರಾಫ್​ ಗಲ್ಲಿಯ ಬಸವೇಶ್ವರ ಬ್ಯಾಂಕ್​ನ ಶಾಖೆಯ ಹೊಸ ಕಟ್ಟಡವನ್ನು ಬುಧವಾರ ಉದ್ಘಾಟಿಸಿ ಮಾತನಾಡಿದರು. ನಾಗನೂರು ರುದ್ರಾಕ್ಷಿಮಠದ ಡಾ.ಅಲ್ಲಮ್ರಭು ಸ್ವಾಮೀಜಿ ಮಾತನಾಡಿ, ಸಮಾಜದ ಅನೇಕ ಹಿರಿಯರು 60 ವರ್ಷಗಳ ಹಿಂದೆ ನಾಟಿ ಮಾಡಿದ ಸಸಿ ಇಂದು ವಟವೃವಾಗಿ ಬೆಳೆದಿದೆ. ಈ ಸಂಸ್ಥೆಯ ಆರ್ಥಿಕ ಸ್ಥಿತಿ ಬಲಿಷ್ಠವಾಗಿದ್ದು, ಜಗಜ್ಯೋತಿ ಬಸವೇಶ್ವರರ ಹೆಸರಿನಲ್ಲಿ ಪ್ರಾರಂಭವಾದ ಸಂಸ್ಥೆ ಅನೇಕರಿಗೆ ಆರ್ಥಿಕ ಸಹಾಯ ನೀಡಿದೆ. ಅದರ ಫಲವಾಗಿ ಹಲವು ಉದ್ಯಮಿಗಳು ಅಭಿವೃದಿಟಛಿಯ ಪಥದಲ್ಲಿದ್ದಾರೆ ಎಂದರು.

ಬ್ಯಾಂಕ್​ ಅಧ್ಯ ರಮೇಶ ಕಳಸಣ್ಣವರ ಮಾತನಾಡಿ, ನಮ್ಮ ಸಂಸ್ಥೆಗೆ 1986ರಲ್ಲಿ ರಿಸರ್ವ್​ ಬ್ಯಾಂಕ್​ನಿಂದ ಬ್ಯಾಂಕಿಂಗ್​ ಪರವಾನಗಿ ದೊರೆಯಿತು. ಆಗಿನ ನಿರ್ದೇಶಕರು ಉತ್ಸಾಹದಿಂದ ಕೆಲಸ ಪ್ರಾರಂಭಿಸಿದರು. ಅದಕ್ಕೆ ದೊರೆತ ಪ್ರತಿಕ್ರಿಯೆ ನೋಡಿಕೊಂಡು ವಿವಿಧ ಶಾಖೆಗಳನ್ನು ಆರಂಭಿಸಿದರು. 1987ರಲ್ಲಿ ಶಹಾಪುರದಲ್ಲಿ ಶಾಖೆ ಆರಂಭಿಸಿತು. ನಂತರ ಹಂತ ಹಂತವಾಗಿ ಕ್ಲಬ್​ ರಸ್ತೆ, ಟಿಳಕವಾಡಿ, ಶಿವಬಸವನಗರ, ನೆಹರೂನಗರ ಸೇರಿ ರಾಮದುರ್ಗ, ರಾಮತೀರ್ಥನಗರ, ಮುಧೋಳ ಹಾಗೂ ಹುಬ್ಬಳ್ಳಿಯಲ್ಲಿ ಶಾಖೆಗಳನ್ನು ಆರಂಭಿಸಲಾಯಿತು. ಇಂದು ಒಟ್ಟು 10 ಶಾಖೆ ಹೊಂದಿರುವ ಸಂಸ್ಥೆಯು ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದರು.

ಡಾ.ಅಲ್ಲಮಪ್ರಭು ಸ್ವಾಮೀಜಿ ಅವರನ್ನು ರಮೇಶ ಕಳಸಣ್ಣವರ ಮತ್ತು ಉಪಾಧ್ಯ ಸತೀಶ ಪಾಟೀಲ ಸನ್ಮಾನಿಸಿದರು. ನಿರ್ದೇಶಕರಾದ ವಿಜಯಕುಮಾರ ಅಂಗಡಿ, ಪ್ರಕಾಶ ಬಾಳೇಕುಂದ್ರಿ, ರಮೇಶ ಸಿದ್ದಣ್ಣವರ, ಬಸವರಾಜ ಝೊಂಡ್​, ಬಸವರಾಜ ಉಪ್ಪಿನ, ಸರಳಾ ಹೇರೆಕರ, ಗಿರೀಶ ಕತ್ತಿಶೆಟ್ಟಿ, ಗಿರೀಶ ಬಾಗಿ, ಸಚಿನ ಶಿವಣ್ಣವರ, ಬಾಲಚಂದ್ರ ಬಾಗಿ, ಜಗದೀಶ ಖಡಬಡಿ, ಪೂಜಾ ಹುಕ್ಕೇರಿ, ಚಂದ್ರಕಾಂತ ಕಟ್ಟಿಮನಿ, ರಾಜೀವ ಕಾಳೆನಟ್ಟಿ, ಮಹಾದೇವ ಅಥಣಿ, ಚಂದ್ರಶೇಖರ ಹಿರೇಮಠ ಹಾಗೂ ವ್ಯವಸ್ಥಾಪನಾ ಮಂಡಳಿ ಸದಸ್ಯರಾದ ರಾಜಶೇಖರ ಚೊಣ್ಣದ, ಸೋಮಶೇಖರ ಹೋಂಬಳ, ಮಹೇಶ ಉಡದಾರ ಮತ್ತು ಪ್ರಧಾನ ವ್ಯವಸ್ಥಾಪಕ ಶಂಕರ ವಾಲಿ, ಸಿಬ್ಬಂದಿ ಮತ್ತು ಪಿಗ್ಮಿ ಏಜೆಂಟರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net