

ರಾಮದುರ್ಗ: ವಿದ್ಯಾರ್ಥಿಗಳು ಏಕಾಗ್ರತೆಯಿಂದ ನಿರಂತರ ಅಧ್ಯಯನ ಮಾಡಿದಲ್ಲಿ ನಿಶ್ಚಿತ ಗುರಿ ತಲುಪಲು ಸಾಧ್ಯವಾಗುತ್ತದೆ ಎಂದು ಪಿಎಸ್‌ಐ ಸವಿತಾ ಮುನ್ಯಾಳ ಹೇಳಿದರು.
ಪಟ್ಟಣದ ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘದ ಸ್ಟೇಟ್ ಸಂಯುಕ್ತ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಈಚೆಗೆ ಏರ್ಪಡಿಸಿದ್ದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಪ್ರಾಚಾರ್ಯ ಬೂದೇಶ್ವರ ಎಸ್.ಎಸ್. ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ಸಂಪನ್ಮೂಲಗಳ ಸದ್ಬಳಕೆ ಮಾಡಿಕೊಂಡು ಸಾಧಿಸಬೇಕು ಎಂದರು.
ಉಪ ಪ್ರಾಚಾರ್ಯ ಎಸ್.ಬಿ. ದಾಸರ, ಉಪನ್ಯಾಸಕಿ ಉಮಾ ಮಾಚಕನೂರ, ಎಸ್.ಬಿ. ಕಳಸಪ್ಪನವರ, ಉಪನ್ಯಾಸಕ ಎಂ.ಎನ್. ಚಂದರಗಿ, ಜಿ.ಎಸ್. ಹಿರೇಮಠ ಇದ್ದರು.