ನಿರಂತರ ಪ್ರಯತ್ನದಿಂದ ಸಂಶೋಧನೆ ಸಾಧ್ಯ

web1
ಕೊಕಟನೂರ ಗ್ರಾಮದ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಕಾರ್ಯಾಗಾರದಲ್ಲಿ ಉಪನ್ಯಾಸಕ ಡಾ.ಮಹಾವೀರ ಕಾಳೆ ಅವರನ್ನು ಸತ್ಕರಿಸಲಾಯಿತು. ಸಿದ್ಧರಾಮ ಯರನಾಳ, ಪರಪ್ಪ ಮಗದುಮ ಇತರರಿದ್ದರು.
Published on

ಅಥಣಿ ಗ್ರಾಮೀಣ: ಹೊಸ ಸಿದ್ಧಾಂತಗಳ ಅಭಿವೃದ್ಧಿಪಡಿಸುವಿಕೆಯೇ ಸಂಶೋಧನೆಯಾಗಿದೆ. ನಿರಂತರ ಪ್ರಯತ್ನದಿಂದ ಮಾತ್ರ ಸಂಶೋಧನೆ ಸಾಧ್ಯ ಎಂದು ಉಪನ್ಯಾಸಕ ಡಾ.ಮಹಾವೀರ ಕಾಳೆ ಹೇಳಿದರು.

ಅಥಣಿ ತಾಲೂಕಿನ ಕೊಕಟನೂರ ಗ್ರಾಮದ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಐಕ್ಯೂಎಸಿ ಹಾಗೂ ಸಂಶೋಧನಾ ಅಭಿವೃದ್ಧಿ ಘಟಕದ ಸಹಯೋಗದಲ್ಲಿ ಸಂಶೋಧನಾ ಸಾಧ್ಯತೆಗಳು ಎಂಬ ವಿಷಯ ಕುರಿತು ಶನಿವಾರ ಹಮ್ಮಿಕೊಂಡಿದ್ದ ಒಂದು ದಿನದ ವಿಶೇಷ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಂಶೋಧನಾ ಅಭಿವೃದ್ಧಿ ಘಟಕ ಸಂಚಾಲಕ ಪ್ರೊ.ಪರಪ್ಪ ಮಗದುಮ ಮಾತನಾಡಿದರು. ಪ್ರಾಚಾರ್ಯ ಸಿದ್ಧರಾಮ ಯರನಾಳ, ಐಕ್ಯೂಎಸಿ ಸಂಚಾಲಕ ಪ್ರೊ.ಡಾ.ಸತೀಶ ಮೋಹಿತೆ, ಪ್ರೊ.ಕಪಿಲ ಕಾಂಬಳೆ, ಪ್ರೊ.ಅಪ್ಪಾಸಾಬ ಕಣಬೂರ, ಪ್ರೊ.ಕುಮಾರ ತಕತರಾವ, ಡಾ, ಪ್ರಭಾಕರ ಕ್ಯಾಡಿ ಇತರರು ಇದ್ದರು. ಅಕ್ಷತಾ ಪೂಜಾರಿ ಸ್ವಾಗತಿಸಿದರು. ರಮೇಶ ಸಕ್ರಿ ನಿರೂಪಿಸಿದರು. ಶ್ರೀಕಾಂತ ಜಾಧವ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net