ಸತತ ಪ್ರಯತ್ನದಿಂದ ಗುರಿ ಮುಟ್ಟಲು ಸಾಧ್ಯ

ald-1 (5)
Published on

ಆಲ್ದೂರು: ನಿರಂತರ ಪರಿಶ್ರಮ, ಸತತ ಪ್ರಯತ್ನದಿಂದ ನಮ್ಮ ಗುರಿ ಮುಟ್ಟಬಹುದು ಎಂದು 1999ನೇ ಸಾಲಿನ ವಿದ್ಯಾರ್ಥಿ, ಡಿಸಿಪಿ ಸಜಿತ್ ಹೇಳಿದರು.

ಆಲ್ದೂರಿನ ಸರ್ಕಾರಿ ಹಿರಿಯ ಮತ್ತು ್ರೌಡಶಾಲೆಯಲ್ಲಿ 1999 ನೇ ಸಾಲಿನ ವಿದ್ಯಾರ್ಥಿಗಳಿಂದ ಪ್ರೌಢಶಾಲೆ ಸಭಾಂಗಣದಲ್ಲಿ ಗುರುವಂದನಾ ಕಾರ್ಯಕ್ರಮದಲ್ಲಿ ಮಾತನಾಡಿ, ನಾನು ಪದವಿ ಓದುತ್ತಿರುವಾಗ ನನ್ನ ಭವಿಷ್ಯದ ಬಗ್ಗೆ ಸ್ಪಷ್ಟತೆ ಇರಲಿಲ್ಲ .ಯಾವ ಕ್ಷೇತ್ರ ಆಯ್ಕೆ ಮಾಡಿಕೊಳ್ಳಬೇಕು ಎಂಬ ಗೊಂದಲವಿತ್ತು. ನನ್ನ ಕೆಲ ಉಪನ್ಯಾಸಕರು, ಸ್ನೇಹಿತರು ಸ್ಪರ್ಧಾತ್ಮಕ ಪರೀಕ್ಷೆ ತೆಗದುಕೊಳ್ಳುವಂತೆ ಸಲಹೆ ನೀಡಿದರು. 2004ರಲ್ಲಿ ನನ್ನ ಪದವಿ ಮುಗಿದ ನಂತರ ನಾನು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸಿ ಸತತ 6 ವರ್ಷ ಆಧ್ಯಯನ ನಡೆಸಿ ಎಲ್ಲ ರಂಗದಲ್ಲೂ ಕೆಲಸ ಮಾಡಿ ನಂತರ ನನ್ನ ಗುರಿ ತಲುಪಿದ್ದೇನೆ. ನಿರಂತರ ಪರಿಶ್ರಮ, ಸತತ ಪ್ರಯತ್ನದಿಂದ ನಮ್ಮ ಗುರಿ ಮುಟ್ಟಬಹುದು ಎಂದು ಸಲಹೆ ನೀಡಿದರು.

ಪ್ರಸ್ತುತ ದಿನಗಳಲ್ಲಿ ಎಲ್ಲ ಕ್ಷೇತ್ರದಲ್ಲೂ ಪ್ರಬಲ ಸ್ಪರ್ಧೆ ಇದೆ. ಕನ್ನಡದ ಜತೆಗೆ ಆಂಗ್ಲ ಮಾಧ್ಯಮದಲ್ಲೂ ಹೆಚ್ಚು ಪರಿಣಿತರಾಗುವುದು ಅವಶ್ಯಕ. ಗ್ರಾಮೀಣ ಭಾಗದ ಮಕ್ಕಳಿಗೆ ಇಂಗ್ಲಿಷ್ ಕಲಿಕೆಗೆ ಸಹಕಾರ ನೀಡಿ, ಪ್ರಸ್ತುತ ವಿದ್ಯಾಮಾನಗಳ ಬಗ್ಗೆ ಅರಿವು ಹೊಂದುವುದು ಮುಖ್ಯ. ಶಾಲಾ ಹಂತದಲ್ಲೇ ವಿದ್ಯಾರ್ಥಿಗಳ ಆಸಕ್ತಿ ಗುರುತಿಸಿ ಪ್ರೋತ್ಸಾಹಿಸಬೇಕು ಎಂದರು.

ಬಿಲ್‌ಕಲೆಕ್ಟರ್ ಸಂಘದ ರಾಜ್ಯಾಧ್ಯಕ್ಷ ನಾರಾಯಣ್, ಚಂದ್ರಶೇಖರ್, ಮುಖ್ಯಶಿಕ್ಷಕ ಸುರೇಶ್, ಹನಮಂತ್ಪ, ಅಶೋಕ್, ಕಮಲಾಕ್ಷಿ, ಗಿರಿಯಪ್ಪ ಪ್ರಶಾಂತ್,ಹರೀಶ್,ಯೋಗಾನಂದ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net