

ನಿಪ್ಪಾಣಿ: ಕಠಿಣ ಪರಿಶ್ರಮದಿಂದ ಮಾತ್ರ ಯಶಸ್ಸು ಸಾಧ್ಯ. ಮಾಡುವ ಕೆಲಸವನ್ನು ಆತ್ಮವಿಶ್ವಾಸದಿಂದ ಮಾಡಬೇಕು ಎಂದು ಶೇಗುಣಸಿ ವಿರಕ್ತಮಠದ ಮಹಾಂತ ಸ್ವಾಮೀಜಿ ಹೇಳಿದರು.
ಸ್ಥಳೀಯ ವಿದ್ಯಾ ಸಂವರ್ಧಕ ಮಂಡಳದ 66ನೇ ಸಂಸ್ಥಾಪನಾ ದಿನದ ಅಂಗವಾಗಿ ವಿಎಸ್‌ಎಂ ಫೌಂಡೇಷನ್ ವತಿಯಿಂದ ಶನಿವಾರ ವಿಎಸ್‌ಎಂ ಸೋಮಶೇಖರ ಆರ್. ಕೋಠಿವಾಲೆ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ಟರ್ಫ್ ಮೈದಾನ ಉದ್ಘಾಟನೆ ಹಾಗೂ ಮ್ಯಾರಥಾನ್ ವಿಜೇತರಿಗೆ ಬಹುಮಾನ ವಿತರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ವೈದ್ಯ ಡಾ.ರಾಹುಲ ದೇವರಾಜ ಮಾತನಾಡಿ, ಜೀವನ ಮ್ಯಾರಥಾನ್ ಇದ್ದಂತೆ ಎಂದರು. ಮ್ಯಾರಥಾನ್ ಮಹಿಳಾ ವಿಭಾಗದಲ್ಲಿ ವೈಷ್ಣವಿ ರಾವಳ ಪ್ರಥಮ, ಪ್ರಿಯಾ ಪಾಟೀಲ ದ್ವಿತೀಯ, ಸಂಕೇಶ್ವರ ನೂರಜಾನ್ ಮುಜಾವರ ತೃತೀಯ, ಪುರುಷರ ವಿಭಾಗದಲ್ಲಿ ಆನಂದ ರಾವಳ ಪ್ರಥಮ, ಮಲ್ಲಿಕಾರ್ಜುನ ಎಂ.ಎಸ್. ದ್ವಿತೀಯ, ಪುಷ್ಕರ ಥಾವರೆ ತೃತೀಯ ಸ್ಥಾನ ಪಡೆದರು.
ವಿಎಸ್‌ಎಂಎಸ್ ಆರ್‌ಕೆಐಟಿಯಲ್ಲಿ ನಿರ್ಮಿಸಿದ ಟರ್ಫ್ ಮೈದಾನವನ್ನು ಮಹಾಂತ ಸ್ವಾಮೀಜಿ ಹಾಗೂ ಗಣ್ಯರು ಉದ್ಘಾಟಿಸಿದರು. ಚೇರ್ಮನ್ ಚಂದ್ರಕಾಂತ ಕೋಠಿವಾಲೆ, ಅಧ್ಯಕ್ಷ ಚಂದ್ರಕಾಂತ ತಾರಳೆ, ಉಪಾಧ್ಯಕ್ಷ ಪಪ್ಪು ಪಾಟೀಲ, ಉಪಾಧ್ಯಕ್ಷ ರಜತ ಢೋಲೆ, ಸಂಚಾಲಕ ಹರಿಶ್ಚಂದ್ರ ಶಾಂಡಗೆ, ಸಂಜಯ ಮೊಳವಾಡೆ, ಆನಂದ ಗಿಂಡೆ, ಅವಿನಾಶ ಪಾಟೀಲ, ಪ್ರವೀಣ ಪಾಟೀಲ, ಶೇಖರ ಪಾಟೀಲ, ಗಣೇಶ ಖಡೇದ, ಸಂಜಯ ಶಿಂತ್ರೆ, ಸಂತೋಷ ಕೋಠಿವಾಲೆ, ಸುನೀಲ ಬಲ್ಲೋಳ, ರೋಹನ ಕೋಠಿವಾಲೆ, ವಿನಾಯಕ ಪಾಟೀಲ, ಸಿಇಒ ಡಾ. ಸಿದ್ಧಗೌಡ ಪಾಟೀಲ, ಶಿಲ್ಪಾ ರೋಖಡೆ ಇತರರು ಇದ್ದರು.