

ಕೊಪ್ಪಳ: ಎಸ್‌ಬಿಐ ಆರ್‌ಸೆಟ್‌ನಿಂದ ಮಹಿಳೆಯರಿಗೆ ಹಮ್ಮಿಕೊಂಡಿದ್ದ 30 ದಿನಗಳ ಲಘು ವಾಹನ ತರಬೇತಿ ಶಿಬಿರ ಪೂರ್ಣಗೊಂಡಿದ್ದು, ಸಮಾರೋಪ ಕಾರ್ಯಕ್ರಮ ವೇಳೆ ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೆಯ ಮಹಿಳೆಯರೊಂದಿಗೆ ಟ್ರಾೃಕ್ಟರ್ ಏರಿ ಪ್ರೋತ್ಸಾಹಿಸಿದರು.
ಗ್ರಾಪಂಗಳ ಸ್ವಚ್ಛತಾ ವಾಹನಗಳಿಗೆ ಮಹಿಳೆಯರನ್ನು ಚಾಲಕರಾಗಿ ನೇಮಿಸಿಕೊಳ್ಳಲಾಗುವುದು. ಪ್ರತಿ ಮನೆಗಳಿಂದ ಕಸ ಸಂಗ್ರಹಿಸಿ ಗ್ರಾಮದ ಸ್ವಚ್ಛತೆೆ ಹಾಗೂ ತೆರಿಗೆ ಸಂಗ್ರಹಣೆಗೆ ಒತ್ತು ನೀಡಬೇಕು. ನೇಮಕವಾದ ಆರು ತಿಂಗಳವರಗೆ ಗ್ರಾಪಂನಿಂದ ವೇತನ ಸಿಗಲಿದೆ. ನಂತರ ತೆರಿಗೆ ಸಂಗ್ರಹಿಸುವ ಹಣದಲ್ಲಿ ವೇತನ ನೀಡಲಾಗುವುದು ಎಂದು ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೆಯ ಹೇಳಿದರು.
ತರಬೇತಿ ಪಡೆದ 26 ಮಹಿಳೆಯರಿಗೆ ಚಾಲನಾ ಮತ್ತು ತರಬೇತಿ ಪ್ರಮಾಣ ಪತ್ರ ನೀಡಲಾಯಿತು. ಅಶೋಕ ವೃತ್ತದಲ್ಲಿ ಮಹಿಳೆಯರು ಚಲಾಯಿಸಿದ ಟ್ಯಾಕ್ಟರ್‌ನಲ್ಲಿ ಜಿಪಂ ಸಿಇಒ ಪ್ರಯಾಣಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ತಾಪಂ ಇಒ ದುಂಡಪ್ಪ ತುರಾದಿ, ಲೀಡ್ ಬ್ಯಾಂಕ್ ಜಿಲ್ಲಾ ವ್ಯವಸ್ಥಾಪಕ ವಿರೇಂದ್ರ ಕುಮಾರ, ಆರ್‌ಸೆಟ್ ನಿರ್ದೇಶಕ ಶ್ರೀನಿವಾಸ ರಾಜ ಪುರೋಹಿತ, ಜಿಪಂ ಸಂಜೀವಿನಿ ಘಟಕದ ಅಂಬಣ್ಣ ಇತರರಿದ್ದರು.