ಪರೋಪಕಾರದಿಂದ ಆತ್ಮತೃಪ್ತಿ

24AINAPUR1
Published on

ಐನಾಪುರ: ಸಂಪಾದನೆಯ ಸ್ವಲ್ಪ ಹಣವನ್ನು ಪರೋಪಕಾರಕ್ಕಾಗಿ ದಾನ ಮಾಡಿದರೆ ದೇವರು ಅಧಿಕಾರ, ಆಸ್ತಿ-ಅಂತಸ್ತಿನ ರೂಪದಲ್ಲಿ ಮರಳಿ ಕೊಡುತ್ತಾನೆ ಎಂದು ಐನಾಪುರ-ಕೃಷ್ಣಾಕಿತ್ತೂರ ಗುರುದೇವಾಶ್ರಮದ ಬಸವೇಶ್ವರ ಸ್ವಾಮೀಜಿ ಹೇಳಿದರು.

ಪಟ್ಟಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ವಿಶ್ವನಾಥ ದೇವಸ್ಥಾನದ ಮಹಾದ್ವಾರದ ಉದ್ಘಾಟನೆ ಹಾಗೂ ಪ್ರವಚನ ಮಂಗಳೋತ್ಸವ ಸಮಾರೋಪದಲ್ಲಿ ಮಾತನಾಡಿ, ದಾನ ಮಾಡುವುದರಿಂದ ಮಾನಸಿಕ ನೆಮ್ಮದಿ ಸಿಗುತ್ತದೆ ಎಂದರು. ದೇವಸ್ಥಾನಕ್ಕೆ ಧನಸಹಾಯ ನೀಡಿದ ರಾಕೇಶ ಕಾರ್ಚಿ ಸೇರಿ ಇತರರನ್ನು ಸತ್ಕರಿಸಲಾಯಿತು.

ವಿಜಯಪುರ ಷಡಕ್ಷರಿ ಸ್ವಾಮೀಜಿ, ಶ್ರೀರಂಗ ಜೋಶಿ, ವಿಶ್ವನಾಥ ಜೋಶಿ, ಶಂಕರಯ್ಯ ಮಳಿಮಠ, ಪ್ರುಲ್ ಕಾರ್ಚಿ, ಪ್ರೇಮಲತಾ ರಡ್ಡಿ, ಉಮೇಶ ಕಾರ್ಚಿ, ರಾಹುಲ ಕಾರ್ಚಿ, ಅರವಿಂದ ಕಾರ್ಚಿ, ಮೋರೇಶ್ವರ ಪಟವರ್ಧನ, ವೀರೇಶ ಕಾರ್ಚಿ, ಶಿವಪ್ರಸಾದ ಕಾರ್ಚಿ, ವಿರೂಪಾಕ್ಷ ಡೂಗನವರ, ಪ್ರಕಾಶ ಕೊರ್ಬು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net