ಆಯುರ್ವೇದದಿಂದ ಅಡ್ಡಪರಿಣಾಮಗಳಿಲ್ಲ

8 HBH 01
ನಂದಿಪುರ ಕ್ಷೇತ್ರದಲ್ಲಿ ಮೃಗಶಿರ ನಕ್ಷತ್ರದ ವೇಳೆ ಅಸ್ತಮಾ ರೋಗಿಗಳಿಗೆ ಆಯುರ್ವೇದ ಔಷಧ ಉಚಿತವಾಗಿ ಭಾನುವಾರ ನೀಡಲಾಯಿತು. ಸೋಮೇಶ್ವರ ಸ್ವಾಮೀಜಿ, ಚರಂತೇಶ್ವರ ಸ್ವಾಮೀಜಿ, ವೈದ್ಯರಾದ ಬಸವರಾಜ ಹಿರೇಮಠ ಮತ್ತು ಡಾ.ಕಲ್ಲೇಶಕುಮಾರ ಹಿರೇಮಠ, ಕೆ.ಯಮನಪ್ಪ, ಕಿರಣ, ಕರಬಸಗೌಡ್ರು ಮತ್ತಿತರರು ಇದ್ದರು.
Published on

ಹಗರಿಬೊಮ್ಮನಹಳ್ಳಿ: ತಾಲೂಕಿನ ಪುಣ್ಯಕ್ಷೇತ್ರ ನಂದಿಪುರದ ಗುರುದೊಡ್ಡ ಬಸವೇಶ್ವರ ಮಠದಲ್ಲಿ ಮೃಗಶಿರ ನಕ್ಷತ್ರ ಕೂಡುವ ಸಮಯದಲ್ಲಿ ಡಾ. ಮಹೇಶ್ವರ ಸ್ವಾಮೀಜಿ ಮಾರ್ಗದರ್ಶನದಂತೆ ಪಾರಂಪರಿಕ ವೈದ್ಯರಿಂದ ದಮ್ಮು, ಕೆಮ್ಮು, ಅಸ್ತಮಾ ರೋಗಿಗಳಿಗೆ ಉಚಿತವಾಗಿ ಆಯುರ್ವೇದ ಔಷಧವನ್ನು ಭಾನುವಾರ ಬೆಳಗ್ಗೆ ವಿತರಿಸಲಾಯಿತು. ಈ ಕಾರ್ಯಕ್ರಮಕ್ಕೆ ಉತ್ತಂಗಿ ಮಠದ ಸೋಮಶಂಕರ ಸ್ವಾಮೀಜಿ ಹಾಗೂ ಗದ್ದಿಕೆರೆ ಮಠದ ಚರಂತೇಶ್ವರ ಸ್ವಾಮೀಜಿ ಚಾಲನೆ ನೀಡಿದರು.

ಸೋಮಶೇಖರ ಸ್ವಾಮೀಜಿ ಮಾತನಾಡಿ, ಆಯುರ್ವೇದ ಔಷಧ ಬಳಕೆ ಒಲವು ನೀಡಬೇಕು. ಇದರಿಂದ ಯಾವುದೇ ಅಡ್ಡ ಪರಿಣಾಮಗಳಿರುವುದಿಲ್ಲ ಎಂದರು. ಚರಂತೇಶ್ವರ ಸ್ವಾಮಿಜಿ ಮಾತನಾಡಿ, ವರ್ಷದಲ್ಲಿ ಮೃಗಶಿರ ನಕ್ಷತ್ರವು ವಿಶೇಷತೆಯಿಂದ ಕೂಡಿದ್ದು, ಈ ಸಮಯದಲ್ಲಿ ಔಷಧ ಪಡೆಯುವುದರಿಂದ ದಮ್ಮು, ಕೆಮ್ಮು, ಅಸ್ತಮಾ ರೋಗಗಳಿಂದ ಗುಣಮುಖರಾಗಬಹುದು ಎಂದರು.

ಗದಗ ಜಿಲ್ಲೆಯ ನೆಗಳೂರಿನ ಪಾರಂಪರಿಕ ವೈದ್ಯರಾದ ಬಸವರಾಜ ಹಿರೇಮಠ, ಡಾ.ಕಲ್ಲೇಶಕುಮಾರ ಹಿರೇಮಠ ಔಷಧ ವಿತರಿಸಿದರು. ರಾಜ್ಯದ ನಾನಾ ಭಾಗದಿಂದ ಅಸ್ತಮಾ ರೋಗಿಗಳು ಆಗಮಿಸಿದ್ದರು. ಈ ಹಿಂದೆ ಔಷಧ ಪಡೆದು ಗುಣಮುಖರಾದವರು ತಮ್ಮ ಅಭಿಪ್ರಾಯಗಳನ್ನು ವೇದಿಕೆಯಲ್ಲಿ ಹಂಚಿಕೊಂಡರು. ಪ್ರಮುಖರಾದ ಕೆ.ಯಮನಪ್ಪ, ಡಾ.ಅಜ್ಜಯ್ಯ, ಬನ್ನಿಗೋಳ ವೆಂಕಣ್ಣ, ಎಚ್.ಎಂ.ಕೊಟ್ರೇಶ, ಚಾಂದ್‌ಭಾಷ, ತಂಬ್ರಹಳ್ಳಿ ಶಿವಮೂರ್ತಿಸ್ವಾಮಿ, ಕಿರಣ, ಕರಬಸಗೌಡ್ರು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net