3 ವರ್ಷದ ಮಗುವಿನೊಂದಿಗೆ ಗೃಹಿಣಿ ನೇಣಿಗೆ ಶರಣು

12kkr (1-25 death Silpa jakanahalli
Published on

 ಕಿಕ್ಕೇರಿ: ಹೋಬಳಿಯ ಜಕ್ಕನಹಳ್ಳಿ ಗ್ರಾಮದಲ್ಲಿ ಶನಿವಾರ ರಾತ್ರಿ ಗೃಹಿಣಿಯೊಬ್ಬಳು ತನ್ನ 3 ವರ್ಷದ ಪುತ್ರನೊಂದಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಗ್ರಾಮದ ಪುಟ್ಟಸ್ವಾಮಿ ಪತ್ನಿ ಶಿಲ್ಪಾ(27), ಪುತ್ರ ದೀಕ್ಷಿತ್(3)ಮೃತರು. ಘಟನೆಗೆ ಕೌಟುಂಬಿಕ ಕಲಹ ಕಾರಣ ಎನ್ನಲಾಗಿದೆ. ಸಂತೆಬಾಚಹಳ್ಳಿ ಹೋಬಳಿಯ ಹಲಸನಹಳ್ಳಿ ಗ್ರಾಮದ ಕಾಂತರಾಜು ಅವರ ಮಗಳಾದ ಶಿಲ್ಪಾಳನ್ನು ಜಕ್ಕನಹಳ್ಳಿ ಗ್ರಾಮದ ಮರಿಹುಚ್ಚಯ್ಯ-ಕಾಳಮ್ಮ ದಂಪತಿ ಪುತ್ರ ಪುಟ್ಟಸ್ವಾಮಿಗೆ ವಿವಾಹ ಮಾಡಿಕೊಡಲಾಗಿತ್ತು. ಆರಂಭದಲ್ಲಿ ಅನೋನ್ಯವಾಗಿದ್ದ ಕುಟುಂಬದಲ್ಲಿ ಈಚೆಗೆ ಗಲಾಟೆ ನಡೆದು ರಾಜೀ ಪಂಚಾಯಿತಿ ಕೂಡ ನಡೆದಿತ್ತು.

ಇದರಿಂದ ಖಿನ್ನತೆಗೊಳಗಾಗಿದ್ದ್ದ ಶಿಲ್ಪಾ ಶನಿವಾರ ರಾತ್ರಿ ಮನೆಯಲ್ಲಿ ತನ್ನ ಪುತ್ರ ದೀಕ್ಷಿತ್‌ಗೆ ನೇಣು ಹಾಕಿದ್ದಾರೆ. ಪುತ್ರಿ ಧನುಶ್ರೀಗೂ ನೇಣು ಹಾಕಲು ಮುಂದಾಗಿದ್ದಾರೆ. ಧನುಶ್ರೀ ಭಯದಿಂದ ಮನೆಯಿಂದ ಹೊರಗಡೆ ಓಡಿ ಹೋಗಿದ್ದಾಳೆೆ. ತದನಂತರ ತಾನೂ ಕೂಡ ನೇಣುಬಿಗಿದುಕೊಂಡು ಮೃತಪಟ್ಟಿದ್ದಾರೆ. ಮನೆಯ ಹೊರಗಡೆ ಇದ್ದ ಕುಟುಂಬಸ್ಥರು ವಿಷಯ ತಿಳಿದು ಒಳಬರುವಷ್ಟರಲ್ಲಿ ದೀಕ್ಷಿತ್, ಶಿಲ್ಪಾ ಮೃತಪಟ್ಟಿದ್ದರು.

ಕಿಕ್ಕೇರಿ ಠಾಣೆಯಲ್ಲಿ ಮೃತಳ ತಂದೆ ಕಾಂತರಾಜು ನೀಡಿರುವ ದೂರಿನ ಮೇರೆಗೆ ಪೊಲೀಸ್ ತನಿಖೆ ಕೈಗೊಂಡಿದ್ದಾರೆ.

ಕೆ.ಆರ್.ಪೇಟೆ ಸಾರ್ವಜನಿಕ ಆಸ್ಪತ್ರೆ ಶಾವಾಗಾರದಲ್ಲಿ ಮರಣೋತ್ತರ ಪರೀಕ್ಷೆ ಬಳಿಕ ವಾರಸುದಾರರಿಗೆ ದೇಹ ಹಸ್ತಾಂತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net