ಶಾಲೆ ಬಳಿ ಮಾಟ ಮಂತ್ರ

NYK SHALE 23
Published on

ನಾಯಕನಹಟ್ಟಿ: ತಿಮ್ಮಪ್ಪಯ್ಯನಹಳ್ಳಿ ಸರ್ಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕರ ಕೊಠಡಿ ಬಳಿ ವಾಮಾಚಾರ ಮಾಡಿದ್ದು, ಶಾಲಾ ಸಿಬ್ಬಂದಿ, ಮಕ್ಕಳು, ಪಾಲಕರು ಆತಂಕಕ್ಕೆ ಒಳಗಾಗಿದ್ದಾರೆ.

ಶನಿವಾರ ಬೆಳಗ್ಗೆ ಶಾಲೆಗೆ ಆಗಮಿಸಿದ ಶಿಕ್ಷಕರಿಗೆ ತಲೆಬುರುಡೆ, ಮೂಳೆ, ನಿಂಬೆಹಣ್ಣು ಹಾಗೂ ಇತರ ವಸ್ತುಗಳನ್ನು ಇಟ್ಟು ರಂಗೋಲಿ ಹಾಕಿ ವಾಮಾಚಾರ ಮಾಡಿರುವುದು ಕಂಡಿದೆ. ಇದನ್ನು ಕಂಡು ಬೆಚ್ಚಿಬಿದ್ದ ಶಿಕ್ಷಕರು, ಸಿಬ್ಬಂದಿ ತಕ್ಷಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಶಾಲೆಯಲ್ಲಿ ಯಾರೋ ಒಬ್ಬರನ್ನು ಗುರಿಯಾಗಿಸಿಕೊಂಡು ಕಿಡಿಗೇಡಿಗಳು ಈ ಕೃತ್ಯ ಎಸಗಿರಬಹುದು ಎಂದು ಶಂಕೆ ವ್ಯಕ್ತಪಡಿಸಲಾಗಿದೆ.

ವಿಷಯ ತಿಳಿದು ತಳುಕು ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net