ಬುದ್ಧಿ ಚುರುಕುಗೊಳಿಸುವ ಆಟ ಆಡಿಸಿ

Kampli Sports Day
ಅಂತಾರಾಷ್ಟ್ರೀಯ ಮಕ್ಕಳ ಆಟದ ದಿನ ನಿಮಿತ್ತ ಎಮ್ಮಿಗನೂರು ಗ್ರಂಥಾಲಯದಲ್ಲಿ ಆಯೋಜಿಸಿದ್ದ ಚದುರಂಗ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಪ್ರಮುಖರಾದ ಕೆ.ದೊಡ್ಡಬಸಪ್ಪ, ಶಿವನೇಗೌಡರ ರಾಮಪ್ಪ, ಉಮೇಶ್ ಇತರರಿದ್ದರು.
Published on

ಕಂಪ್ಲಿ: ಆಟ ಮತ್ತು ಪಾಠವನ್ನು ಸಮಾನವಾಗಿ ಸ್ವೀಕರಿಸುವಲ್ಲಿ ವಿದ್ಯಾರ್ಥಿಗಳು ಜಾಗೃತಿವಹಿಸಬೇಕು ಎಂದು ಎಮ್ಮಿಗನೂರು ಗ್ರಾಪಂ ಕಾರ್ಯದರ್ಶಿ ಕೆ.ದೊಡ್ಡಬಸಪ್ಪ ಹೇಳಿದರು.

ಎಮ್ಮಿಗನೂರಿನ ಸಾರ್ವಜನಿಕ ಗ್ರಂಥಾಲಯದಲ್ಲಿ ಗ್ರಾಪಂನಿಂದ ಮಂಗಳವಾರ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಮಕ್ಕಳ ಆಟದ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಪಾಠ ಬೌದ್ಧಿಕ ಜ್ಞಾನ ನೀಡಿದರೆ, ಆಟೋಟಗಳು ದೈಹಿಕ, ಮಾನಸಿಕ ಸಾಮರ್ಥ್ಯವನ್ನು ಹೆಚ್ಚಿಸುತ್ತವೆ. ಮಕ್ಕಳ ಮನಸ್ಸು, ಬುದ್ಧಿ ಮತ್ತು ದೇಹ ಚುರುಕುಗೊಳಿಸುವ ಆಟಗಳನ್ನು ಆಡಿಸುವಲ್ಲಿ ಶಿಕ್ಷಕರು ಮುಂದಾಗಬೇಕು ಎಂದರು.

ಶಿಕ್ಷಕ ಶಿವನೇಗೌಡರ ರಾಮಪ್ಪ ಮಾತನಾಡಿದರು. ವಿದ್ಯಾರ್ಥಿಗಳಿಗೆ ಚದುರಂಗ, ಕೇರಂ ಸೇರಿ ನಾನಾ ಆಟಗಳ ಸ್ಪರ್ಧೆ ಆಯೋಜಿಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಗ್ರಂಥಪಾಲಕ ಉಮೇಶ್, ವಿದ್ಯಾರ್ಥಿಗಳಾದ ಶಾಂತಿ, ಜ್ಯೋತಿ, ಮಾನಸ, ಗೌರಿ, ಮಣಿಕಂಠ, ರಾಜಶೇಖರ, ಮೋಹನ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net