ಬುದ್ಧಿಮಾತಿಗೆ ಮನನೊಂದು ಬಾಲಕಿ ಆತ್ಮಹತ್ಯೆ

Sucide vvani
Published on

ಮೂಡುಬಿದಿರೆ: ಮಕ್ಕಳೊಂದಿಗೆ ಜಗಳವಾಡುತ್ತಿದ್ದುದನ್ನು ಗಮನಿಸಿದ ಅಕ್ಕ ಬುದ್ದಿಮಾತು ಹೇಳಿದ್ದರಿಂದ ಮನನೊಂದ ತಂಗಿ ಆತ್ಮಹತ್ಯೆಗೆ ಶರಣಾದ ಘಟನೆ ಮೂಡುಮಾರ್ನಾಡಿನ ಗುಡ್ಡದ ಮೇಲು ಎಂಬಲ್ಲಿ ಗುರುವಾರ ನಡೆದಿದೆ.

ಸ್ಥಳೀಯ ಕರುಣಾಕರ ಸುಶೀಲಾ ದಂಪತಿ ಪುತ್ರಿ ಪೂಜಾ(13) ಆತ್ಮಹತ್ಯೆ ಮಾಡಿಕೊಂಡಾಕೆ. ಗುರುವಾರ ಮಧ್ಯಾಹ್ನ ತನ್ನ ಸಂಬಂಧಿಕರ ಮಕ್ಕಳೊಂದಿಗೆ ಆಟವಾಡುತ್ತಿದ್ದ ಪೂಜಾ ಬಳಿಕ ಅವರೊಂದಿಗೆ ಜಗಳವಾಡಿದ್ದಳು ಎನ್ನಲಾಗಿದೆ. ಇದನ್ನು ಗಮನಿಸಿದ ಹಿರಿಯಕ್ಕ ಸಣ್ಣ ಮಕ್ಕಳಿಗೆ ಹೊಡೆಯಬಾರದು ಎಂದು ಪೂಜಾಗೆ ಬುದ್ದಿ ಮಾತು ಹೇಳಿದ್ದಳು. ಅಷ್ಟಕ್ಕೇ ಮನನೊಂದ ಪೂಜಾ ಮನೆ ಬಳಿ ಇರುವ ಸರ್ಕಾರಿ ಹಾಡಿಯ ಮರದ ಕೊಂಬೆಗೆ ಚೂಡಿದಾರ್ ಶಾಲ್‌ನಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮೂಡುಬಿದಿರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net