ಹಿಂಗಾರು ಜೋಳ ಖರೀದಿಗೆ ನೋಂದಣಿ ಶೀಘ್ರ

HAMPANAGOUDA BADARLI
Published on

ಸಿಂಧನೂರು: ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಹಿಂಗಾರು ಬೆಳೆ ಜೋಳ ಖರೀದಿಗೆ ನೋಂದಣಿ ಆರಂಭಿಸಲು ಶಾಸಕ ಹಂಪನಗೌಡ ಬಾದರ್ಲಿ ಸೋಮವಾರ ಆಹಾರ ಇಲಾಖೆ ಆಯುಕ್ತರಿಗೆ ಪತ್ರ ಬರೆದಿದ್ದು, ಒಂದೆರಡು ದಿನದಲ್ಲಿ ಆರಂಭಿಸುವ ಭರವಸೆ ಸಿಕ್ಕಿದೆ.

ಈಗಾಗಲೇ ಮುಂಗಾರು ಜೋಳ ಖರೀದಿ ಪ್ರಕ್ರಿಯೆ ಆರಂಭ ಮಾಡಲಾಗಿದೆ. ತಾಲೂಕಿನ ವಲ್ಕಂದಿನ್ನಿ ಹೋಬಳಿ ಮಟ್ಟದಲ್ಲಿ ಹಿಂಗಾರು ಜೋಳ ನೋಂದಣಿಗೆ ಆದೇಶ ನೀಡಿಲ್ಲ. ಕಳೆದ ವರ್ಷ ಖರೀದಿ ಕೇಂದ್ರದಿಂದ 1286 ರೈತರಿಂದ 86,400 ಕ್ವಿಂ.ಜೋಳ ಖರೀದಿಯಾಗಿದೆ. ಈ ವರ್ಷ 1686 ಜನರಿಂದ ಹಿಂಗಾರು ಜಿಪಿಎಸ್ ನೋಂದಣಿಯಾಗಿದ್ದು, ಈವರೆಗೆ ಸರ್ಕಾರ ಖರೀದಿ ಆದೇಶ ನೀಡಿಲ್ಲ.

ರೈತರಲ್ಲಿ ಗೊಂದಲ ಉಂಟು ಮಾಡಿದ್ದು, ಮಾರುಕಟ್ಟೆಯಲ್ಲಿ ಬೆಂಬಲ ಬೆಲೆ ಯೋಜನೆ ದರಕ್ಕಿಂತ 1200 ರೂ. ಕಡಿಮೆ ಇದೆ. ಕೂಡಲೇ ಹಿಂಗಾರು ಬೆಳೆ ಜೋಳ ನೋಂದಣಿ ಹಾಗೂ ಖರೀದಿಗೆ ಆದೇಶ ನೀಡಬೇಕೆಂದು ಪತ್ರದಲ್ಲಿ ಒತ್ತಾಯಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಆಯುಕ್ತರು, ಒಂದೆರಡು ದಿನದಲ್ಲಿ ಆರಂಭಿಸಲಾಗುವುದೆಂದು ಭರವಸೆ ನೀಡಿದ್ದಾರೆಂದು ಶಾಸಕ ಹಂಪನಗೌಡ ಬಾದರ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net