ಜಿಲ್ಲಾ ಯೋಗಾಸನ ಸ್ಪರ್ಧೆಯ ವಿಜೇತರು

WhatsApp Image 2024-08-06 at 5.02.13 PM
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಜಿಲ್ಲಾ ಯೋಗಾಸನ ಸ್ಪೋರ್ಟ್ಸ್ ಅಸೋಸಿಯೇಷನ್ ಮತ್ತು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಯೋಗದಲ್ಲಿ ನಗರದ ಆರ್.ಎನ್. ಶೆಟ್ಟಿ ಒಳಾಂಗಣ ಕ್ರೀಡಾಂಗಣದಲ್ಲಿ ಮಂಗಳವಾರ ಜಿಲ್ಲಾ ಯೋಗಾಸನ ಸ್ಪರ್ಧೆ ಆಯೋಜಿಸಲಾಗಿತ್ತು.
ಸ್ಪರ್ಧೆಯ ಫಲಿತಾಂಶ:
ಬಾಲಕಿಯರ ವಿಭಾಗ:
10ರಿಂದ 14 ವಯೋಮಿತಿಯಲ್ಲಿ ರತ್ನಾ ಶಾಗೋಟಿ, ಅಪೂರ್ವ ಕುಸುಗಲ್, ಹೇಮಾ ಬಳಗೇರ ಅನುಕ್ರಮ ಸ್ಥಾನ ಪಡೆದರು. 14ರಿಂದ 18 ವಯೋಮಿತಿಯಲ್ಲಿ ಸಾಕ್ಷಿ ಶಿರಹಳ್ಳಿ, ರಮ್ಯಾ ಕಲಾದಗಿ, ಯಶಸ್ವಿನಿ ಅನುಕ್ರಮ ಸ್ಥಾನ ಪಡೆದರು. 18ಕ್ಕಿಂತ ಹೆಚ್ಚಿನ ವಯೋಮಿತಿಯಲ್ಲಿ ಶ್ರೇಯಾ ವಸ್ತçದ್ ಪ್ರಥಮ, 36ರಿಂದ 45 ವಯೋಮಿತಿಯಲ್ಲಿ ರಾಧಾ ಸಾಲಿ ಪ್ರಥಮ ಸ್ಥಾನ ಪಡೆದರು.

ಬಾಲಕರ ವಿಭಾಗ:
10ರಿಂದ 14 ವಯೋಮಿತಿಯಲ್ಲಿ ವರುಣ ಕುರಹಟ್ಟಿ, ವಿಜಯ ಅರಳಿಕಟ್ಟಿ, ಸಂತೋಷ್ ಮಳಲಿ ಅನುಕ್ರಮ ಸ್ಥಾನ ಪಡೆದರು. 14ರಿಂದ 18 ವಯೋಮಿತಿಯಲ್ಲಿ ವಿನಾಯಕ ಅರಳಿಕಟ್ಟಿ, ಶಿವಾನಂದ ಕುಂದಗೊಳ, ಅಭಿಷೇಕ ಪಲ್ಲೇದ ಹಾಗೂ 45ರಿಂದ 55 ವಯೋಮಿತಿಯಲ್ಲಿ ವಿನಾಯಕ ಕೊಂಗಿ, ಅಶೋಕ ತಿರ್ಲಾಪುರ, ನಿಂಗಪ್ಪ ದೊಡ್ಡಸುಂಕದ ಅನುಕ್ರಮ ಸ್ಥಾನ ಪಡೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net