ಗೆಲ್ಲುವವರು, ಪಕ್ಷ ನಿಷ್ಠರಿಗೆಲ್ಲ ಟಿಕೆಟ್: ಪ್ರಲ್ಹಾದ್ ಜೋಷಿ

9 smg Prahlad joshi
Published on

ಶಿವಮೊಗ್ಗ: ಟಿಕೆಟ್ ಹಂಚಿಕೆ ಒಂದು ಪಕ್ಷದ ಪ್ರಕ್ರಿಯೆ. ಇದರಲ್ಲಿ ಯಾವುದೇ ಕಸರತ್ತು ಎಂಬುದಿಲ್ಲ. ಚುನಾವಣೆ ಘೋಷಣೆ ಆಗದಿದ್ದರೂ ಈಗಾಗಲೇ 195 ಕ್ಷೇತ್ರದ ಅಭ್ಯರ್ಥಿಗಳ ಹೆಸರನ್ನು ಬಿಜೆಪಿ ಪ್ರಕಟಿಸಿದೆ. ಎಲ್ಲರೊಂದಿಗೆ ಮಾತುಕತೆ ನಡೆಸಿ ಗೆಲ್ಲುವ ಅಭ್ಯರ್ಥಿಗಳ ಗಮನಿಸಿ ರಾಷ್ಟ್ರೀಯ ನಾಯಕರು ತೀರ್ಮಾನ ಮಾಡುತ್ತಾರೆ. ಹಾಲಿ ಸಂಸದರನ್ನು ಕೈಬಿಡುವ ಯಾವುದೇ ಪ್ರಕ್ರಿಯೆ ಇಲ್ಲ. ಇದೆಲ್ಲ ಊಹಾಪೋಹ. ಗೆಲ್ಲುವ ಅಭ್ಯರ್ಥಿಗಳಿಗೆ, ಪಕ್ಷ ನಿಷ್ಠರಿಗೆಲ್ಲ ಟಿಕೆಟ್ ಸಿಗಲಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಷಿ ಹೇಳಿದರು.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಐತಿಹಾಸಿಕ ದಾಖಲೆಯ ವಿಜಯವನ್ನು ಈ ಬಾರಿ ನಾವು ಪಡೆಯಲಿದ್ದೇವೆ. 370ಕ್ಕೂ ಹೆಚ್ಚು ಸ್ಥಾನ ಬಿಜೆಪಿ ಗೆಲ್ಲಲ್ಲಿದೆ. ಅಭೂತಪೂರ್ವ ಬದಲಾವಣೆ ತರುತ್ತೇವೆ. ಸಿದ್ದರಾಮಯ್ಯ ತುಷ್ಟೀಕರಣ ರಾಜಕಾರಣ ನಡೆಯುತ್ತಿದೆ. ‘ಪಾಕಿಸ್ತಾನ ಪರ ಘೋಷಣೆ ಕೂಗುವವರಿಗೆ ರಕ್ಷಣೆ, ಹಿಂದುಸ್ತಾನ್ ಜಿಂದಾಬಾದ್ ಅಂದವರಿಗೆ ಶಿಕ್ಷೆ’ ಇದು ಸಿಎಂ ಸಿದ್ದರಾಮಯ್ಯ ಧೋರಣೆ. ಜನ ಇದನ್ನು ಗಮನಿಸುತ್ತಿದ್ದಾರೆ. ಕರ್ನಾಟಕದಲ್ಲಿ ಕಳೆದ ಬಾರಿ 26 ಸ್ಥಾನ ಗೆದ್ದಿದ್ದೆವು. ಈ ಬಾರಿ 28 ಸ್ಥಾನ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net