ವಿಜೇತರಿಗೆ ಬಹುಮಾನ ವಿತರಣೆ

0101
Published on

ಬೆಳಗಾವಿ: ಮಕ್ಕಳು ಕಲಿಕೆಯ ಜತೆಗೆ ಕ್ರೀಡೆಗಳಲ್ಲಿ ಪಾಲ್ಗೊಂಡು ಸಾಧನೆ ಮಾಡಬೇಕು ಎಂದು ಸ್ಕೇಟಿಂಗ್ ಕ್ರೀಡಾಪಟು ರೋಹನ ಕೊಂಕಣೆ ಹೇಳಿದರು.

ನಗರದ ಟಿಳಕವಾಡಿಯ ಶ್ರೀ ಹೋಮ್ಸ್ ರಹವಾಸಿ ಸಂಘದ ವತಿಯಿಂದ ಇತ್ತೀಚೆಗೆ ಆಯೋಜಿಸಿದ್ದ ವಿವಿಧ ಕ್ರೀಡಾ ಸ್ಪರ್ಧೆಗಳ ವಿಜೇತರಿಗೆ ಪ್ರಶಸ್ತಿ ಪತ್ರ ಹಾಗೂ ಬಹುಮಾನ ವಿತರಿಸಿ ಅವರು ಮಾತನಾಡಿದರು. ಪ್ರಾಥಮಿಕ ಕಲಿಕಾ ಹಂತದಲ್ಲಿಯೇ ಮಕ್ಕಳು ವಿವಿಧ ಕ್ರೀಡೆಗಳಲ್ಲಿ ಭಾಗವಹಿಸುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು.

ಇದರಿಂದ ಭವಿಷ್ಯ ಉಜ್ವಲವಾಗುತ್ತದೆ ಎಂದರು. ಲತಾ ಕತ್ತಿ, ಆಶಾ ಕಾಕಡೆ, ಅನುಪಮಾ, ಪೂರ್ಣಿಮಾ, ಅನುಷಾ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net