ನೆಲಮಂಗಲದ ‘ನಾರಿ ನಿನಗೊಂದು ಸ್ಯಾರಿ’ ವಿಜೇತರು

Winner of Nelamangala's 'Nari Ninagego Sari'
Winner of Nelamangala's 'Nari Ninagego Sari'
Published on

ನಗರಸಭೆ ಅಧ್ಯಕ್ಷೆ ಲತಾಹೇಮಂತ್‌ಕುಮಾರ್ ಭಾಗಿ

ಓದುಗರಿಂದ ಅಭೂತಪೂರ್ವ ಸ್ಪಂದನೆ

ವಿಜಯವಾಣಿ ಸುದ್ದಿಜಾಲ ನೆಲಮಂಗಲ
ಸಮಾಜದ ವಿದ್ಯಮಾನವನ್ನು ಓದುಗರಿಗೆ ತಲುಪಿಸುತ್ತಿರುವ ದಿನಪತ್ರಿಕೆಗಳ ಪೈಕಿ ವಿಜಯವಾಣಿ ಮುಂಚೂಣಿಯಲ್ಲಿದ್ದು, ವಿಶೇಷತೆಗಳಿಂದ ಜನಮನ್ನಣೆ ಗಳಿಸಿದೆ ಎಂದು ನಗರಸಭೆ ಅಧ್ಯಕ್ಷೆ ಲತಾ ಹೇಮಂತ್‌ಕುಮಾರ್ ಹೇಳಿದರು.
ನಗರದ ಪವಾಡ ಶ್ರೀ ಬಸವಣ್ಣ ದೇವರ ಮಠದಲ್ಲಿ ಆಯೋಜಿಸಿದ್ದ ವಿಜಯವಾಣಿ ‘ನಾರಿ ನಿನಗೊಂದು ಸ್ಯಾರಿ’ ರಸಪ್ರಶ್ನೆ ಸ್ಪರ್ಧೆಯಲ್ಲಿ ಲಕ್ಕಿ ಡಿಪ್ ಮೂಲಕ ವಿಜೇತರನ್ನು ಆಯ್ಕೆ ಮಾಡಿ ಮಾತನಾಡಿದರು. ಇತ್ತೀಚೆಗೆ ಮಹಿಳೆಯರು ದೂರದರ್ಶನದ ಕಾರ್ಯಕ್ರಮಗಳು, ಧಾರಾವಾಹಿಗೆ ಮೊರೆ ಹೋಗಿದ್ದು, ಪತ್ರಿಕೆೆ ಓದುಗರ ಸಂಖ್ಯೆ ಕಡಿಮೆಯಾಗಿದೆ. ಪತ್ರಿಕೆ ಓದು ಒಳ್ಳೆಯ ಅಭ್ಯಾಸವಾಗಿದ್ದು, ಉತ್ತಮ ಜ್ಞಾನ ಪಡೆದುಕೊಳ್ಳುವಲ್ಲಿ ಸಹಕಾರಿಯಾಗಿದೆ ಎಂದರು.
ಮಹಿಳೆಯರು ಮೊಬೈಲ್, ದೂರದರ್ಶನ, ಸಾಮಾಜಿಕ ಜಾಲತಾಣದಲ್ಲಿ ಸಮಯ ವ್ಯರ್ಥ ಮಾಡುವ ಬದಲು ವಿಜಯವಾಣಿ ಪತ್ರಿಕೆ ಓದುವ ಮೂಲಕ ಜ್ಞಾನ ವೃದ್ಧಿಸಿಕೊಳ್ಳಬೇಕು. ಮಹಿಳೆಯರ ಪ್ರತಿಭೆ ಅನಾವರಣಗೊಳಿಸುವ ನಿಟ್ಟಿನಲ್ಲಿ ವಿಜಯವಾಣಿ ‘ನಾರಿ ನಿನಗೊಂದು ಸ್ಯಾರಿ’ ಹೆಸರಿನಡಿ ವಿಶೇಷ ಪ್ರಯತ್ನ ನಡೆಸಿರುವುದು ಸ್ವಾಗತಾರ್ಹವಾಗಿದೆ ಎಂದರು.

ಸೀರೆಗೆ ವಿಶೇಷ ಸ್ಥಾನಮಾನ: ಭಾರತೀಯ ಸಂಸ್ಕೃತಿಯಲ್ಲಿ ಸೀರೆಗೆ ವಿಶೇಷ ಸ್ಥಾನ ಮಾನವಿದೆ. ಮಹಿಳೆಯರಿಗೆ ಸ್ತ್ರೀಯರಿಗೆ ಸೀರೆ ಅತ್ಯಂತ ಪ್ರಿಯವಾದ ಉಡುಗೆಯಾಗಿದೆ ಎಂದು ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷೆ ರಾಜಮ್ಮಪ್ರಕಾಶ್ ಹೇಳಿದರು.
ವಿಜಯವಾಣಿ ‘ನಾರಿ ನಿನಗೊಂದು ಸ್ಯಾರಿ’ ಎಂಬ ಪರಿಕಲ್ಪನೆಯೊಂದಿಗೆ ಮಹಿಳೆಯರಿಗೆ ಸ್ಪರ್ಧಾತ್ಮಕ ಮನೋಭಾವ ಬೆಳೆಸುವ ಜತೆಗೆ ದಿನಪ್ರತಿಕೆ ಓದುವ ಹವ್ಯಾಸ ಬೆಳೆಸುತ್ತಿರುವುದು ಶ್ಲಾಘನಾರ್ಹ ಎಂದರು. ಸಮಾಜದಲ್ಲಿನ ವಿದ್ಯಮಾನಗಳ ಬಗ್ಗೆ ಅರಿವು ಮೂಡಿಸಿಕೊಳ್ಳುವ ಸಲುವಾಗಿ ಮಹಿಳೆಯರು ವಿಜಯವಾಣಿ ಪತ್ರಿಕೆ ಕೊಂಡು ಓದುವ ಹವ್ಯಾಸ ರೂಢಿಸಿಕೊಳ್ಳಬೇಕು. ಮುಂದಿನ ದಿನಗಳಲ್ಲಿ ಪತ್ರಿಕೆಯಿಂದ ಮತ್ತಷ್ಟು ಸಮಾಜ ಮುಖಿ ಕಾರ್ಯಕ್ರಮಗಳನ್ನು ನಿರೀಕ್ಷಿಸುತ್ತೇವೆ ಎಂದರು.
ಉಪನ್ಯಾಸಕಿ ಅಕ್ಕಮಹಾದೇವಿ, ಭಾಜಪ ಮಹಿಳಾ ಮೋರ್ಚಾ ಗ್ರಾಮಾಂತರ ಜಿಲ್ಲಾಧ್ಯಕ್ಷೆ ಸೌಮ್ಯಾ, ಅಖಿತ ಭಾರತ ವೀರಶೈವ ಮಹಾಸಭಾ ಜಿಲ್ಲಾ ಉಪಾಧ್ಯಕ್ಷ ನೀಲಮ್ಮ, ನಿರ್ದೇಶಕಿ ದಾಕ್ಷಾಯಣಮ್ಮ, ಶೀಲಾ, ಕರ್ಣೇಶ್ವರಿ, ಪುಷ್ಪಾವತಿ, ವೇದಾವತಿ, ಪ್ರತಿಕಾ ವಿತರಕ ಕೆ.ಕೆ.ಹಳ್ಳಿ ಪ್ರಮೋದ್‌ಕುಮಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net