ವೈನ್‌ಶಾಪ್ ಮೇಲೆ ಅಬಕಾರಿ ದಾಳಿ

11athani_aparak_01-Web
ಅಬಕಾರಿ ಸಿಬ್ಬಂದಿ ದರೂರು ಗ್ರಾಮದಲ್ಲಿರುವ ವೈನ್‌ಶಾಪ್ ಮೇಲೆ ದಾಳಿ ನಡೆಸಿ ಪರಿಶೀಲಿಸುತ್ತಿರುವುದು.
Published on

ಅಥಣಿ: ಅಥಣಿ ತಾಲೂಕಿನ ದರೂರು ಗ್ರಾಮದಲ್ಲಿರುವ ವೈನ್‌ಶಾಪ್ ಒಂದರಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಗೋಕಾಕ ಅಬಕಾರಿ ನಿರೀಕ್ಷಕ ಶಂಕರಗೌಡ ಪಾಟೀಲ ನೇತೃತ್ವದ ಅಧಿಕಾರಿಗಳ ತಂಡ ಶನಿವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಆದರೆ, ನೈಜ ಸಂಗತಿ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡದಿರುವುದು ಸ್ಥಳೀಯರಿಗೆ ಅನುಮಾನ ಮೂಡಲು ದಾರಿ ಮಾಡಿಕೊಟ್ಟಿದೆ.

ಪ್ರಭಾವಿಗಳ ಒತ್ತಡ?: ಅಕ್ರಮ ಮದ್ಯ ಮಾರಾಟ ಮಾಡುತ್ತಿರುವ ವೈನ್ ಶಾಪ್‌ಗೆ ದಾಳಿ ನಡೆಸಿದ ಅಧಿಕಾರಿಗಳ ಮೇಲೆ ಪ್ರಭಾವಿ ನಾಯಕರು ಒತ್ತಡ ಹಾಕಿ, ಯಾವುದೆ ಕ್ರಮ ಕೈಗೊಳ್ಳದಂತೆ ಸೂಚಿಸಿದ್ದಾರೆ ಎನ್ನುವ ಆರೋಪ ಕೇಳಿಬರುತ್ತಿದೆ. ಜತೆಗೆ ಸ್ಥಳಕ್ಕೆ ವರದಿ ಮಾಡಲು ತೆರಳಿದ್ದ ಮಾಧ್ಯಮ ಪ್ರತಿನಿಧಿಗಳಿಗೆ ಸುದ್ದಿ ಮಾಡದಂತೆ ಅಧಿಕಾರಿಗಳು ತಡೆದರು. ನಂತರ ಮೇಲಧಿಕಾರಿಗಳ ಗಮನಕ್ಕೆ ತಂದ ಮೇಲೆ ಪತ್ರಕರ್ತರಿಗೆ ವರದಿ ಮಾಡಲು ಅವಕಾಶ ಮಾಡಿಕೊಟ್ಟರು.

ಲಾಕ್‌ಡೌನ್ ಕಾರಣದಿಂದಾಗಿ ಮದ್ಯಪ್ರಿಯರು ಹೆಚ್ಚಿನ ಹಣ ನೀಡಿ ಮದ್ಯ ಸೇವಿಸುತ್ತಿರುವ ಮಾಹಿತಿ ಲಭ್ಯವಾಗಿದೆ. ಅಲ್ಲದೆ, ಗಡಿ ತಾಲೂಕಿನ ಗ್ರಾಮಗಳಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿರುವ ಬಗ್ಗೆ ದೂರು ಬಂದಿವೆ. ಹೀಗಾಗಿ ರೂಟೀನ್ ಚೆಕ್ ಮಾಡಲು ದರೂರ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಲಾಗಿದೆ. | ಶಂಕರಗೌಡ ಪಾಟೀಲ ಅಬಕಾರಿ ನಿರೀಕ್ಷಕ ಗೋಕಾಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net