ಗಾಳಿ-ಮಳೆ: ಮನೆಗಳ ಛಾವಣಿಗೆ ಹಾನಿ

20 RPT 1
ರಿಪ್ಪನ್‌ಪೇಟೆಯಲ್ಲಿ ಮಳೆಗಾಳಿಗೆ ಮನೆಯೊಂದರ ಛಾವಣಿ ಹಾರಿ ಹೋಗಿರುವುದು.
Published on

ರಿಪ್ಪನ್‌ಪೇಟೆ: ಪಟ್ಟಣ ಸೇರಿದಂತೆ ಸುತ್ತಮುತ್ತಲ ಹಳ್ಳಿಗಳಲ್ಲಿ ಶುಕ್ರವಾರ ತಡರಾತ್ರಿ ಸುರಿದ ಗಾಳಿ-ಮಳೆಗೆ ಹಲವು ಮನೆ, ಕೊಟ್ಟಿಗೆ ಛಾವಣಿಗಳು ಜಖಂಗೊಂಡಿದೆ. ಹಲವೆಡೆ ಮರಗಳು, ವಿದ್ಯುತ್ ಕಂಬಗಳು ನೆಲಕಚ್ಚಿವೆ.

ಪಟ್ಟಣದ ಶಬರೀಶನಗರದ ಪುಟ್ಟಮ್ಮ, ವಿನಾಯಕನಗರದ ರಾಘವೇಂದ್ರ ಎಂಬುವರ ಮನೆಯ ಗೋಡೆಗಳು ಕುಸಿದು ಬಿದ್ದಿವೆ. ಬಾಳೂರು ಗ್ರಾಪಂ ವ್ಯಾಪ್ತಿಯ ಕಾಳೇಶ್ವರದ ಕೃಷ್ಣಪ್ಪ ಎಂಬುವರ ಜಾನುವಾರು ಕೊಟ್ಟಿಗೆ ಸಂಪೂರ್ಣ ಹಾನಿಗೊಂಡಿದೆ. ಕಂದಾಯ ಮತ್ತು ಗ್ರಾಮ ಪಂಚಾಯತಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net