ಗಾಳಿಗೆ ಉರಿಳಿದ ಮರಗಳು

Rain_cloud
Published on

ತಾವರಗೇರಾ: ಹೋಬಳಿ ವ್ಯಾಪ್ತಿಯ ಜೂಲಕುಂಟಿ, ಮ್ಯಾದರಡೊಕ್ಕಿ, ಗರಜನಾಳ ಗ್ರಾಮಗಳ ಸುತ್ತ ಶುಕ್ರವಾರ ಬೆಳಗಿನ ಜಾವ ಬೀಸಿದಗಾಳಿಗೆ ಗಿಡಗಳು ನೆಲಕ್ಕೆ ಉರಿಳಿವೆ.

ಕಿಲ್ಲಾರಹಟ್ಟಿ ಗ್ರಾಪಂನ ಜೂಲಕುಂಟಿ ಕ್ಷೇತ್ರದ ಸದಸ್ಯ ನಿಂಗಪ್ಪ ಅವರ ಮನೆ ಮೇಲೆ ಬೇವಿನ ಗಿಡ ಬಿದ್ದು ಹಾನಿ ಸಂಭವಿಸಿದೆ. ಅದೇ ಗ್ರಾಮದ ಹನಮಪ್ಪ ಬೊದೂರ, ಛತ್ರಮ್ಮ ವಂದಾಲಿ ಇವರ ಮನೆಗಳ ಛಾವಣಿ ಕುಸಿದು ಬಿದ್ದಿವೆ. ಗಾಳಿಗೆ ಅಲ್ಲಲ್ಲಿ ಮಾವಿನ ಗಿಡ, ಪಪ್ಪಾಯ, ಎಲೆಬಳ್ಳಿ ನೆಲಕ್ಕೆ ಬಿದ್ದಿವೆ.

ತಾವರಗೇರಾದಿಂದ ಮ್ಯಾಗಳಡೊಕ್ಕಿ ಗ್ರಾಮಕ್ಕೆ ಸಂಪರ್ಕಿಸುವ ರಸ್ತೆಯಲ್ಲಿ ಗಿಡಗಳು ಬಿದ್ದ ಕಾರಣ ಗರಜನಾಳ, ಜೂಲಕುಂಟಿ ಗ್ರಾಮಗಳ ಮೂಲಕ ಸಂಚಾರಿಸುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಸ್ಥಗಿತಗೊಳಿಸಲಾಗಿದೆ ಎಂದು ಸಾರಿಗೆ ಇಲಾಖೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net