ಗಾಳಿ ಮಳೆಗೆ ಹಲವೆಡೆ ಹಾನಿ

Tree Fall in Yallapura
Published on

ಯಲ್ಲಾಪುರ: ತಾಲೂಕಿನ ಹುತ್ಕಂಡ ಹಾಗೂ ಚಂದಗುಳಿ ಭಾಗದಲ್ಲಿ ಭಾನುವಾರ ಸಂಜೆ ಸುರಿದ ಗಾಳಿ ಮಳೆಯಿಂದ ಹಲವೆಡೆ ಹಾನಿ ಉಂಟಾಗಿದೆ.

ಮಳೆಯ ನೀರಿನ ರಭಸಕ್ಕೆ ರಸ್ತೆಯ ಮೇಲೆ ನೀರು ಹರಿದು ಕಚ್ಚಾ ರಸ್ತೆ ಕೊಚ್ಚಿ ಹೋಗಿದೆ. ವಿದ್ಯುತ್ ಕಂಬಗಳ ಮೇಲೆ ಮರಗಳು ಬಿದ್ದು ಹಾನಿ ಉಂಟಾಗಿದೆ. ತೋಟಕ್ಕೆ ಹಾಕಲಾದ ಮಣ್ಣುಗಳು ಏರಿ ದಿಬ್ಬಗಳು ನೀರಿನ ರಭಸಕ್ಕೆ ಕೊರೆದುಹೋಗಿದೆ.

ಉಪಳೇಶ್ವರ- ಕುಚಗಾಂವ ರಸ್ತೆ ಮಧ್ಯೆ ಭಾರೀ ಗಾತ್ರದ ಮರ ಬಿದ್ದು ಸಂಚಾರ ಸ್ಥಗಿತಗೊಂಡಿತ್ತು. ಅರಣ್ಯ ಇಲಾಖೆಯವರು, ಸ್ಥಳೀಯರ ಸಹಕಾರದೊಂದಿಗೆ ಮರ ತೆಗೆದು ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net