ಅಭಿವೃದ್ಧಿಗೆ ಶಿವಾನಂದ ಪಾಟೀಲರನ್ನು ಗೆಲ್ಲಿಸಿ

Win Sivananda Patil for development
ಬಸವನಬಾಗೇವಾಡಿ ಪಟ್ಟಣದ ವಿವಿಧ ವಾರ್ಡ್‌ಗಳಲ್ಲಿ ಶಾಸಕ ಶಿವಾನಂದ ಪಾಟೀಲ ಪರ ಕಾಂಗ್ರೆಸ್ ಮುಖಂಡರು ಪಾದಯಾತ್ರೆ ನಡೆಸಿ ಮತಯಾಚಿಸಿದರು
Published on

ಬಸವನಬಾಗೇವಾಡಿ: ಕಾಂಗ್ರೆಸ್ ಪಕ್ಷದ ಅಭ್ಯರ್ಥಿ, ಶಾಸಕ ಶಿವಾನಂದ ಪಾಟೀಲ ಪರ ಪಟ್ಟಣದಲ್ಲಿ ಕಾಂಗ್ರೆಸ್ ಪಕ್ಷದ ವಿವಿಧ ಘಟಕದ ಪಟ್ಟಣದ ಗಾಂಧಿ ನಗರ, ಶ್ರೀರಾಮ ನಗರ, ಚನ್ನಬಸವೇಶ್ವರ ನಗರ, ಭಜಂತ್ರಿ ಓಣಿ, ನಂದಗೋಕುಲ ನಗರ ಸೇರಿ ಪಟ್ಟಣದ ವಿವಿಧ ವಾರ್ಡ್‌ಗಳಲ್ಲಿ ಮತದಾರರ ಮನೆಮನೆಗೆ ತೆರಳಿ ಅಭಿವೃದ್ಧಿಗೆ ಶಿವಾನಂದ ಪಾಟೀಲರನ್ನು ಗೆಲ್ಲಿಸಲು ಮತಯಾಚಿಸಿದರು.

ಕಾಂಗ್ರೆಸ್ ಯುವ ಮುಖಂಡ ಶಂಕರಗೌಡ ಬಿರಾದಾರ, ಸಂಗಮೇಶ ಓಲೇಕಾರ, ಮಹಿಳಾ ಅಧ್ಯಕ್ಷ ರುಕ್ಮೀಣಿ ರಾಠೋಡ, ಪರಶುರಾಮ ಅಡಗಿಮನಿ ಮಾತನಾಡಿ, ರಾಜ್ಯದಲ್ಲಿ ಈ ಬಾರಿ ಕಾಂಗ್ರೆಸ್ ಆಡಳಿತಕ್ಕೆ ಬರುವುದರಲ್ಲಿ ಸಂದೇಹವೇ ಇಲ್ಲ. ಬಸವನಬಾಗೇವಾಡಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಶಾಸಕ ಶಿವಾನಂದ ಪಾಟೀಲ ಅವರನ್ನು ಅಧಿಕ ಮತಗಳಿಂದ ಗೆಲ್ಲಿಸಿದಲ್ಲಿ ಅವರು ಸಚಿವರಾಗಿ ಮತ್ತಷ್ಟು ಈ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿ ಕೈಗೊಳ್ಳಲು ಸಹಕಾರವಾಗುತ್ತದೆ ಎಂದರು.

ಈ ಕ್ಷೇತ್ರದಲ್ಲಿ ಶಾಸಕ ಶಿವಾನಂದ ಪಾಟೀಲ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಈಗಾಗಲೇ ಅನ್ಯಪಕ್ಷದ ಕಾರ್ಯಕರ್ತರು, ಮುಖಂಡರು, ತಂಡೋಪ ತಂಡವಾಗಿ ಕಾಂಗ್ರೆಸ್ ಸೇರ್ಪಡೆಗೊಂಡು ಶಾಸಕರ ಕೈ ಬಲಪಡಿಸುತ್ತಿದ್ದಾರೆ. ಇನ್ನೊಂದು ಬಾರಿ ಶಾಸಕರಾಗಿ ಕ್ಷೇತ್ರದಲ್ಲಿ ಬಾಕಿಯಿರುವ ಅಭಿವೃದ್ಧಿ ಕೆಲಸಗಳನ್ನು ಮಾಡಲು ಬೆಂಬಲಿಸಬೇಕು ಎಂದರು.

ಬಸವರಾಜ ಕೋಟಿ, ದಯಾನಂದ ಜಾಲಗೇರಿ, ಸಂಗಯ್ಯ ಕಾಳಹಸ್ತೇಶ್ವರಮಠ, ರವಿ ರಾಠೋಡ, ಬಸವರಾಜ ರಾಯಗೊಂಡ, ಜಂಟಿಗರಾಯ ಮಾಲಗಾರ, ಜಗದೇವಿ ಗುಂಡಳ್ಳಿ, ಮಲ್ಲು ಪಡಶೆಟ್ಟಿ, ಮತಾಬ ಬೊಮ್ಮನಹಳ್ಳಿ, ನಜೀರ ಗಣಿ, ಶಂಕರಗೌಡ ಪಾಟೀಲ ಕಮಲಸಾಬ ಕೊರಬು, ಪರಶುರಾಮ ಜಮಖಂಡಿ, ಅಬ್ಬು ಚೌಧರಿ, ಸಂಜು ಕಲ್ಯಾಣಿ, ಮುರುಗೇಶ ನಾಯ್ಕೋಡಿ, ವಿಶ್ವನಾಥ ಹಾರಿವಾಳ, ಮಹಾಂತೇಶ ಹಂಚಗಿ, ಅಪ್ಪು ವಾಡೇದ, ಶಾಂತಾಬಾಯಿ ಕುಂಬಾರ, ಸುನಂದ ವಾಡೇದ, ಉದಯ ಮಾಂಗಲೇಕರ, ಅಜೀಜ ಬಾಗವಾನ, ಎಂ.ಬಿ. ಆದಿಗೊಂಡ, ಅನ್ನಕ್ಕ ಬಂಗಾರಿ, ರತ್ನಾಬಾಯಿ ಕಲ್ಯಾಣಿ, ಗೀತಾ ವಾಡೇದ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net