

ತೋರಣಗಟ್ಟಿ: ಸೋಲು-ಗೆಲುವು ಜೀವನದ ಒಂದು ಭಾಗವಾಗಿದ್ದು, ಸಮನಾಗಿ ಸ್ವೀಕರಿಸಿ ಮುನ್ನುಗ್ಗಬೇಕು ಎಂದು ಜ್ಞಾನಾಮತ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಕೆ.ವೈ. ಹುಣಶೀಕಟ್ಟಿ ಹೇಳಿದರು.
ಗ್ರಾಮದ ಜ್ಞಾನಾಮತ ಆಶ್ರಮ ಶಾಲೆಯಲ್ಲಿ ಉಪನಿರ್ದೇಶಕರ ಕಚೇರಿ, ರಾಮದುರ್ಗ ಕ್ಷೇತ್ರ ಶಿಕ್ಷಣಾಧಿಕಾರಿ ಕಾರ್ಯಾಲಯದ ಆಶ್ರಯದಲ್ಲಿ ಈಚೆಗೆ ಏರ್ಪಡಿಸಿದ್ದ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳ ಜಿಲ್ಲಾಮಟ್ಟದ ಮಲ್ಲಕಂಬ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು. ಮಲ್ಲಕಂಬ ಸ್ಪರ್ಧೆ ಗ್ರಾಮೀಣ ಮಕ್ಕಳಿಗೆ ಅಚ್ಚುಮೆಚ್ಚು. ವಿವಿಧ ಆಸನಗಳ ಮೂಲಕ ಕಂಬದ ಮೇಲಿನ ಕಸರತ್ತು ಅದ್ಭುತ ಎಂದರು.
ಸಂಸ್ಥೆಯ ಕಾರ್ಯದರ್ಶಿಗಳು ಪ್ರಕಾಶ ಕೊಪ್ಪದ ಮಾತನಾಡಿದರು. ಬಾಲಕರು ಮತ್ತು ಮಹಿಳಾ ವಿಭಾಗದ ಮಲ್ಲಕಂಬ ಹಾಗೂ ರ್ೋ ವಿಭಾಗಗಳ ಸ್ಪರ್ಧೆ ನಡೆಯಿತು. ವಿಜೇತರಿಗೆ ಬಹುಮಾನ ಮತ್ತು ಪ್ರಶಸ್ತಿ ಪತ್ರ ವಿತರಿಸಲಾಯಿತು. ರಾಮದುರ್ಗ ಕ್ಷೇತ್ರದ ದೈಹಿಕ ಶಿಕ್ಷಣ ಪರಿವೀಕ್ಷಕ ಎಲ್.ಆರ್. ಕನಕಪ್ಪನವರ, ಕಟಕೋಳ ಸಂಪನ್ಮೂಲ ಅಧಿಕಾರಿ ಎಸ್.ವಿ. ದಿವಟಗಿ, ಮುಖ್ಯ ತರಬೇತಿದಾರ ಮೆಹಬೂಬ್ ಬಂಡಿವಾಡ, ಮುಖ್ಯಶಿಕ್ಷಕ ಬಸವರಾಜ ಕಟ್ಟಿಮನಿ, ಸುರೇಶ ಬಸಿಡೋಣಿ, ಕೃಷ್ಣಪ್ಪ ಸಿದರಡ್ಡಿ, ಬಸವರಾಜ ಹೋಳಿ, ಬಸವರಾಜ ಕೌಜಗೇರಿ, ಮಹೇಶ ಕರೇಗೌಡ್ರ, ಅಭಿಷೇಕ ಕಂಬಾರ, ಸವಿತಾ ಕಡಬಿ, ಸುನಂದಾ ಉಳ್ಳೇಗಡ್ಡಿ, ಭಾರತಿ ನಾಯ್ಕ, ದೀಪಾ ನಾಯ್ಕ ಇತರರಿದ್ದರು.