ಪಕ್ಷ ತೆಗೆದು ಹಾಕುತ್ತೋ? ಬಿಡುತ್ತೋ? ಗೊತ್ತಿಲ್ಲ

kse office inuaguration
ಮಲ್ಲೇಶ್ವರ ಗುಂಡಪ್ಪ ಶೆಡ್‌ನ ಈಶ್ವರಪ್ಪ ಅವರ ನಿವಾಸದಲ್ಲಿ ಶಿವಮೊಗ್ಗ ಲೋಕಸಭಾ ಚುನಾವಣಾ ಕಾರ್ಯಾಲಯವನ್ನು ಮಹಿಳಾ ಕಾರ್ಯಕರ್ತೆಯರು ಉದ್ಘಾಟಿಸಿದರು. ಕೆ.ಎಸ್.ಈಶ್ವರಪ್ಪ ಇದ್ದರು.
Published on

ಶಿವಮೊಗ್ಗ: ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತಿರುವ ನನ್ನನ್ನು ಪಕ್ಷ ತೆಗೆದು ಹಾಕುತ್ತೋ?, ಬಿಡುತ್ತೋ? ಇನ್ನೂ ನನಗೆ ಗೊತ್ತಿಲ್ಲ. ಆದರೆ ನನ್ನನ್ನು ಕೇಸರಿ ನಾಯಕ ಎಂದು ನಾಡಿನ ಜನರು ಒಪ್ಪಿಕೊಂಡಿರುವುದು ನನ್ನ ಸುದೈವ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಸಂತಸ ವ್ಯಕ್ತಪಡಿಸಿದರು.

ಬೇರೆ ಪಕ್ಷ ಕಟ್ಟಿದವರು ಮತ್ತು ಬೇರೆ ಬೇರೆ ಪಕ್ಷಕ್ಕೆ ಹೋದವರು ನನ್ನ ಬಗ್ಗೆ ಮಾತನಾಡಿಕೊಳ್ಳುತ್ತಿದ್ದಾರೆ. ನಾನು ಅದ್ಯಾವುದಕ್ಕೂ ತಲೆಕೆಡಿಸಿಕೊಳ್ಳುವುದಿಲ್ಲ. ನಾನು ಗೆಲ್ಲಬೇಕೆಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಮತದಾರರು ತಮ್ಮ ಹೃದಯಾಂತರಾಳದಿಂದ ಹೇಳುತ್ತಿದ್ದಾರೆ ಎಂದರು.
ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಹೇಳಿ ಪ್ರಚಾರ ಶುರು ಮಾಡಿದಾಗ ಜಿಲ್ಲೆಯ ಹಲವು ಮಠ ಮಂದಿರಗಳಿಗೆ ಭೇಟಿ ನೀಡಿ ಮಠಾಧೀಶರು, ಸ್ವಾಮೀಜಿಗಳ ಆಶೀರ್ವಾದ ಪಡೆದಿದ್ದೆ. ನನಗೆ ಗೆದ್ದು ಬಾ ಎಂದು ಆಶೀರ್ವದಿಸಿದ ಮರುದಿನವೇ ಎಲ್ಲ ಮಠಾಧೀಶರು, ಸ್ವಾಮೀಜಿಗಳಿಗೂ ಕಣ್ಣೀರು ಹಾಕಿಸಿದ್ದಾರೆ. ನಮಗೆ ನೋವು ಕೊಟ್ಟವರು ಮುಂದೆ ಅನುಭವಿಸುತ್ತಾರೆ. ನೀವು ಸ್ಪರ್ಧೆಯಿಂದ ಹಿಂದೆ ಸರಿಯದೇ ಗೆದ್ದು ಬನ್ನಿ ಎಂದು ಹಲವರು ಶುಭ ಹಾರೈಸಿದ್ದಾರೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net