

ಬೆಂಗಳೂರು ಗ್ರಾಮಾಂತರ: ಜಲಚರಗಳ ಸಂಹಾರಕ ಎಂದೇ ಕುಖ್ಯಾತಿ ಪಡೆದಿರುವ, ಸರ್ಕಾರದಿಂದ ನಿಷೇಧಿಸಲ್ಪಟ್ಟಿರುವ ಆಫ್ರಿಕನ್ ಕ್ಯಾಟ್ಫಿಷ್ ದಂಧೆ ಜಿಲ್ಲೆಯ ಹಲವೆಡೆ ಸದ್ದಿಲ್ಲದೆ ಬೇರುಬಿಡುತ್ತಿದೆ. ಈ ರಾಕ್ಷಸ ಮೀನುಗಳು ಕೆರೆಗಳಿಗೆ
ಸೇರಿದರೆ ಮೀನುಗಳ ಸಂತತಿಯನ್ನೇ ಅಪೋಶನ ತೆಗೆದುಕೊಳ್ಳುವ ಆತಂಕ ಎದುರಾಗಿದೆ.
ಕಳೆದೆರಡು ವರ್ಷದಿಂದ ಸದ್ದಡಗಿದ್ದ ಆಫ್ರಿಕನ್ ಕ್ಯಾಟ್ಫಿಷ್ ಸಾಕಣೆ ದಂಧೆ ಮತ್ತೊಮ್ಮೆ ಆಕ್ಟೀವ್ ಆಗಿದೆ. ಈಗ ಜಮೀನುಗಳಲ್ಲಿ ಹೊಂಡಗಳನ್ನು ಮಾಡಿ, ಆಫ್ರಿಕನ್ ಕ್ಯಾಟ್ಫಿಷ್ ಸಾಕಣೆ ಮಾಡಲಾಗುತ್ತಿದೆ. ಇವು ಪಾರ್ಥೇನಿಯಂ ಕಳೆಯಂತೆ ವೇಗವಾಗಿ ಬೆಳೆಯುತ್ತವೆ. ಇವುಗಳ ತಳಿ ಕೆರೆಗಳಿಗೆ ಸೇರಿದರೆ ಕೆಲವೇ ತಿಂಗಳಲ್ಲಿ ಕೆರೆಗಳಲ್ಲಿನ ಮೂಲ ಮೀನುಗಳು ಸೇರಿ ಎಲ್ಲ ಬಗೆಯ ಜಲಚರಗಳನ್ನು ಆಪೋಶನ ತೆಗೆದುಕೊಳ್ಳಲಿದ್ದು, ಕೆರೆಗಳನ್ನು ಗುತ್ತಿಗೆ ಪಡೆದು ಲಾಂತರ ರೂ.ಬಂಡವಾಳ ಹಾಕುವವರಿಗೆ ದೊಡ್ಡ ಹೊಡೆತ ಬೀಳಲಿದೆ. ಸ್ಥಳಿಯ ನಾಟಿ ಮೀನುಗಳ ನಾಮಾವಶೇಷಕ್ಕೆ ಕಾರಣವಾಗುವಂತಹ ರಕ್ಕಸ ಮೀನುಗಳ ಆರ್ಭಟ ಹೆಚ್ಚಲಿದೆ. ಈ ನಿಟ್ಟಿನಲ್ಲಿ ಕಂದಾಯ ಇಲಾಖೆ, ಮೀನುಗಾರಿಕೆ ಇಲಾಖೆ ಹಾಗೂ ಪೊಲೀಸರ ಜಂಟಿ ಕಾರ್ಯಾಚರಣೆ ಅವಶ್ಯಕತೆ ಇದ್ದು, ಈ ದಂಧೆಯನ್ನು ಬೇರುಸಹಿತ ನಿಮೂರ್ಲನೆ ಮಾಡಬೇಕು ಎಂಬ ಆಗ್ರಹ ಕೇಳಿಬರುತ್ತಿದೆ.
ಗಬ್ಬುವಾಸನೆ: ಕ್ಯಾಟ್ಫಿಷ್ ಹೊಂಡಗಳಿರುವ ಸುತ್ತಮುತ್ತಲ ಪ್ರದೇಶ ಅಕ್ಷರಶ@ ಗಬ್ಬುನಾರುತ್ತಿದೆ. ಕಸಾಯಿಖಾನೆ ತ್ಯಾಜ್ಯ ಮತ್ತಿತರ ಹೊಲಸನ್ನೇ ತಿಂದು ಬದುಕುವ ಈ ಮೀನುಗಳ ಹೊಂಡದಿಂದ ಹೊರಹೊಮ್ಮುವ ಗಬ್ಬುವಾಸನೆ ಕಿಮೀವರೆಗೆ ಹರಡುತ್ತದೆ. ಸೊಳ್ಳೆ, ನೊಣಗಳ ಉತ್ಪತ್ತಿ ತಾಣವಾಗುತ್ತಿರುವ ಹೊಂಡಗಳು ಗ್ರಾಮೀಣ ಪ್ರದೇಶಗಳಲ್ಲಿ ಸಾಂಕ್ರಾಮಿಕ ಹರಡುತ್ತಿವೆ.
ಕೃಷಿಭೂಮಿಯಲ್ಲಿ ಕಾನೂನು ಬಾಹಿರ ಚಟುವಟಿಕೆ: ಗ್ರಾಮಾಂತರ ಜಿಲ್ಲೆಯ ಕೃಷಿಭೂಮಿ ಕಾನೂನುಬಾಹಿರ ಚಟುವಟಕೆಗಳಿಗೆ ಬಳಕೆಯಾಗುತ್ತಿದೆ. ಮುಖ್ಯವಾಗಿ ಮಾವು, ನೀಲಗಿರಿ ತೋಪುಗಳು ಕ್ಯಾಟ್ಫಿಷ್ ಹೊಂಡಗಳಾಗಿ ಪರಿವರ್ತನೆಯಾಗುತ್ತಿವೆ. ಈ ದಂಧೆ ನಡೆಯುವ ಸುತ್ತಮುತ್ತಲಿನ ಜಮೀನಿನಲ್ಲಿ ಯಾವುದೇ ಸಲು ಕಾಣಲು ಸಾಧ್ಯವಿಲ್ಲ. ಕ್ಯಾಟ್ಫಿಷ್ ಭಕ್ಷಣೆಗೆ ಮುಗಿಬೀಳುವ ಹದ್ದು, ಗಿಡುಗ, ಕಾಗೆಯಂಥ ಪಗಳು ಇತರ ಬೆಳೆಗಳಿಗೂ ಲಗ್ಗೆಹಾಕುತ್ತವೆ.
ಎಲ್ಲಿಂದ ಎಲ್ಲಿಗೆ ದಂಧೆ?: ಪಶ್ಚಿಮ ಬಂಗಾಳದಿಂದ ದೇವನಹಳ್ಳಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಹಾಗೂ ಆಂಧ್ರಪ್ರದೇಶದಿಂದ ರಸ್ತೆ ಮಾರ್ಗದ ಮೂಲಕ ಜಿಲ್ಲೆಗೆ ಕ್ಯಾಟ್ಫಿಷ್ ಮರಿಗಳು ರವಾನೆಯಾಗುತ್ತಿವೆ ಎಂದು ಅಧಿಕಾರಿಗಳು ಪತ್ತೆಹಚ್ಚಿದ್ದಾರೆ. ಇಲ್ಲಿ ಬೆಳೆದ ಮೀನುಗಳು ಕೋಲ್ಕತ್ತಾ ಸೇರಿ ಉತ್ತರ ಪ್ರದೇಶ, ಅಹಮದಾಬಾದ್, ಮಹಾರಾಷ್ಟ್ರದ ಭಾಗಗಳಿಗೆ ಸಾಗಣೆಯಾಗುತ್ತವೆ ಎನ್ನಲಾಗಿದೆ. ಸ್ಥಳಿಯವಾಗಿ ಹೋಟೆಲ್, ಡಾಬಾಗಳಲ್ಲೂ ವಿವಿಧ ಹೆಸರಿನಲ್ಲಿ ಬಿಕರಿಯಾಗುತ್ತಿದೆ. ಆದರೆ, ಹೊರಗಡೆ ರವಾನೆಯಾಗುವ ಪ್ರಮಾಣ ಹೆಚ್ಚಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೂರ್ನಾಲ್ಕು ವರ್ಷದ ಹಿಂದೆ ತಡೆ: ಈ ಮೊದಲು ಹೊಸಕೋಟೆ ತಾಲೂಕಿನಲ್ಲಿ ಈ ದಂಧೆ ದೊಡ್ಡಮಟ್ಟದಲ್ಲಿ ಸದ್ದು ಮಾಡಿತ್ತು. ಕ್ರಮೇಣ ದೇವನಹಳ್ಳಿ ಹಾಗೂ ದೊಡ್ಡಬಳ್ಳಾಪುರ ಗಡಿಭಾಗಕ್ಕೂ ವಿಸ್ತರಣೆಯಾಗಿತ್ತು. ಈ ಬಗ್ಗೆ ಎಚ್ಚೆತ್ತ ಈ ಹಿಂದೆ ಜಿಲ್ಲಾಧಿಕಾರಿಯಾಗಿದ್ದ ಕರೀಗೌಡ ವಿಶೇಷ ಕಾರ್ಯಾಚರಣೆ ಮೂಲಕ ಜಿಲ್ಲೆಯಲ್ಲಿ ಕ್ಯಾಟ್ಫಿಷ್ ದಂಧೆಗೆ ಪೂರ್ಣವಿರಾಮ ಇಟ್ಟಿದ್ದರು. ಈಗ ಮತ್ತೆ ದಂಧೆ ಗರಿಗೆದರಿದ್ದು, ಪರಿಸರ ನಾಶಕ, ಜಲಚರಗಳ ಸಂಹಾರಕನಿಗೆ ಜಿಲ್ಲೆಯೇ ರಹದಾರಿಯಾಗುತ್ತಿದೆ. ನಾಯಿಕೊಡೆಗಳಂತೆ ಹುಟ್ಟಿಕೊಳ್ಳುತ್ತಿರುವ ಕ್ಯಾಟ್ಫಿಷ್ ಹೊಂಡಗಳು ದಿನೇದಿನೆ ಜಿಲ್ಲೆಯನ್ನು ಆಕ್ರಮಿಸಿಕೊಳ್ಳುತ್ತಿವೆ.
ಆಫ್ರಿಕನ್ ಕ್ಯಾಟ್ಫಿಷ್ ಜಲಚರಗಳ ಹಂತಕನಿದ್ದಂತೆ, ಇವುಗಳನ್ನು ಯಾವುದೇ ಜಲಮೂಲದಲ್ಲಿ ಬಿಟ್ಟರೂ ಅಲ್ಲಿನ ಜಲಚರಗಳನ್ನು ಭಸಿ ಸಂತತಿಯನ್ನೇ ನಾಶ ಮಾಡುತ್ತವೆೆ. ಆಫ್ರಿಕನ್ ಕ್ಯಾಟ್ಫಿಷ್ ಭಾರತದ ತಳಿಯಲ್ಲ. ಹೊರಗಡೆಯಿಂದ ಇಲ್ಲಿಗೆ ಆಮದು ಮಾಡಿಕೊಳ್ಳಲು ಪರವಾನಗಿಯೂ ಇಲ್ಲ. ಈ ಹಿನ್ನೆಲೆಯಲ್ಲಿ ಇದನ್ನು ರ್ನಿಬಂಧಿಸಲಾಗಿದೆ.
ಸುಬ್ರಹ್ಮಣ್ಯ, ಸಹಾಯಕ ಅಧಿಕಾರಿ ಮೀನುಗಾರಿಕೆ ಇಲಾಖೆ