ಬಳ್ಳಾರಿಯಲ್ಲಿ ಪುನೀತ್​ ಹೆಸರಲ್ಲಿ ಉಚಿತ ಶಾಲೆ: ಜನಾರ್ಧನ ರೆಡ್ಡಿ

puneetreddy
Published on

ಬಳ್ಳಾರಿ: ದಿವಂಗತ ನಟ ಪುನೀತ್ ರಾಜ್​ಕುಮಾರ್​​ ಹೆಸರಲ್ಲಿ ಬಳ್ಳಾರಿಯಲ್ಲಿ ಉಚಿತ ಶಾಲೆ ಆರಂಭಿಸುವುದಾಗಿ ಮಾಜಿ ಸಚಿವ ಜನಾರ್ಧನ ರೆಡ್ಡಿ ಘೋಷಿಸಿದ್ದಾರೆ. ಪುನೀತ್ ಶ್ರದ್ದಾಂಜಲಿ ಸಭೆಯಲ್ಲಿ ಇಂದು ಮಾತನಾಡಿದ ಅವರು ಬಳ್ಳಾರಿ ಬಸ್ ನಿಲ್ದಾಣಕ್ಕೆ ಪುನೀತ್​​ ಹೆಸರಿಡುವಂತೆ ಸರ್ಕಾರಕ್ಕೆ ಮನವಿ ಮಾಡಲಾಗುವುದು ಎಂದೂ ಹೇಳಿದರು.

"ಪುನೀತ್ ವಯಸ್ಸಿನಲ್ಲಿ ನನಗಿಂತ ಚಿಕ್ಕವನಾದ್ರೂ ಆತ ಹಾಕಿರುವ ಮಾರ್ಗದಲ್ಲಿ ನಾನೂ ಕೂಡ ಊರಿನ ಜನರಿಗೆ ಸಹಾಯ ಮಾಡುವೆ" ಎಂದ ರೆಡ್ಡಿ, ರಾಜಕೀಯ ಹೊರತಾಗಿ ಜನರ ಸೇವೆ ಮಾಡುವೆ. ನನಗೆ ಸುಪ್ರೀಂ ಕೋರ್ಟ್ ಸಂಪೂರ್ಣವಾಗಿ ಬಳ್ಳಾರಿಯಲ್ಲಿರಲು ಅವಕಾಶ ಕೊಟ್ಟಿದೆ. ಆದ್ದರಿಂದ ಬಳ್ಳಾರಿಯಲ್ಲಿದ್ದು ಪುನೀತ್ ರೀತಿ ಜನ ಸೇವೆ ಮಾಡುವೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net