ರಾಜ್ಯಾಧ್ಯಕ್ಷರು ಬದಲಾದರೆ ಸ್ಪರ್ಧಿಸಲ್ಲ: ಈಶ್ವರಪ್ಪ

Kse
ಕೆ.ಎಸ್.ಈಶ್ವರಪ್ಪ ಮಾಜಿ ಡಿಸಿಎಂ
Published on

ಶಿವಮೊಗ್ಗ: ನಾಳೆಯೇ ಬಿಜೆಪಿ ರಾಜ್ಯಾಧ್ಯಕ್ಷರನ್ನು ಬದಲಾವಣೆ ಮಾಡಿದರೆ ನಾನು ನಿಶ್ಚಿತವಾಗಿಯೂ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ. ಯಡಿಯೂರಪ್ಪ ಕುಟುಂಬ ಚೆನ್ನಾಗಿರಲಿ, ನಾನೆಂದೂ ಅವರಿಗೆ ಕೇಡು ಬಯಸುವುದಿಲ್ಲ. ಲೋಕಸಭೆ ಚುನಾವಣೆಯಲ್ಲಿ ರಾಘವೇಂದ್ರ ಸೋಲಬೇಕು. ಆ ಕುಟುಂಬದ ಹಿಡಿತದಿಂದ ಬಿಜೆಪಿ ಮುಕ್ತವಾಗಬೇಕು ಎಂಬುದೇ ನನ್ನ ಗುರಿ ಎಂದು ಈಶ್ವರಪ್ಪ ಗುಡುಗಿದರು.

ಈ ಹಿಂದೆ ಸಂಘಟನೆ ಪ್ರಮುಖರೆಲ್ಲ ಚರ್ಚಿಸಿದ ಬಳಿಕ ಅಭ್ಯರ್ಥಿಗಳ ಪಟ್ಟಿಯನ್ನು ದೆಹಲಿಗೆ ತೆಗೆದುಕೊಂಡು ಹೋಗುತ್ತಿದ್ದೆವು. ಈಗ ಎಲ್ಲವನ್ನೂ ಯಡಿಯೂರಪ್ಪ ಕುಟುಂಬದವರೇ ಮಾಡುತ್ತಿದ್ದಾರೆ. ಆ ಕುಟುಂಬ ಬಿಟ್ಟರೆ ಬಿಜೆಪಿಯಲ್ಲಿ ಯಾರೂ ಸಮರ್ಥರಿಲ್ಲ ಎಂಬ ಅಭಿಪ್ರಾಯ ಪಕ್ಷದ ವರಿಷ್ಠರಿಗೆ ಬಂದಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.
ನಾನು ಚುನಾವಣೆ ಸ್ಪರ್ಧೆ ಘೋಷಣೆ ಮಾಡಿದ ಬಳಿಕ ಬಿಜೆಪಿಯ ಕಾರ್ಯಕರ್ತರ ಗೌರವ ಹೆಚ್ಚಿದೆ. ಅಮಿತ್ ಷಾ ನನಗೆ ಕರೆ ಮಾಡಿ ಮಾತನಾಡಿದ್ದಾರೆ. 10 ವರ್ಷದಲ್ಲಿ ಒಮ್ಮೆಯೂ ನನ್ನ ಮನೆಗೆ ಬಾರದ ಯಡಿಯೂರಪ್ಪ ಈಗ ಈಶ್ವರಪ್ಪ ಮನೆಗೆ ಹೋಗುತ್ತೇನೆ ಎನ್ನುತ್ತಿದ್ದಾರೆ. ರಾಘವೇಂದ್ರ ಅವರು ಪ್ರತಿ ಕಾರ್ಯಕರ್ತರ ಮನೆಗೆ ಹೋಗುತ್ತಿದ್ದಾರೆ. ಇದೆಲ್ಲವೂ ನನ್ನ ಸ್ಪರ್ಧೆಯ ಪರಿಣಾಮ ಎಂದು ಈಶ್ವರಪ್ಪ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net