ಪೊಲೀಸ್ ಅಧಿಕಾರಿ ಮೇಲೆ ಸಿದ್ದರಾಮಯ್ಯ ಕೈ ಎತ್ತಿರುವ ವಿಚಾರದ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ: ಎಚ್.ಡಿ. ದೇವೇಗೌಡ

Siddu Devegowda
Published on

ಮೈಸೂರು: ಪೊಲೀಸ್ ಅಧಿಕಾರಿ ಮೇಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕೈ ಎತ್ತಿರುವ ವಿಚಾರದ ಕುರಿತು ನಾನು ಪ್ರತಿಕ್ರಿಯೆ ನೀಡಲು ಬಯಸುವುದಿಲ್ಲ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹೇಳಿದರು.

ನಗರದಲ್ಲಿ ಮಂಗಳವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ನಾನು ಆನಂದವಾಗಿ ನಿದ್ರೆ ಮಾಡಿಕೊಂಡು ಬೆಂಗಳೂರಿನಿಂದ ಮೈಸೂರಿಗೆ ಬಂದಿದ್ದೇನೆ. ರಾಜ್ಯ ರಾಜಕಾರಣದ ಬಗ್ಗೆ ಆಗಲಿ, ಸಿಎಂ ಬಗ್ಗೆ ಆಗಲಿ, ಕಾಂಗ್ರೆಸ್ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಬಗ್ಗೆ ಆಗಲಿ ನಾನು ಏನು ಮಾತನಾಡುವುದಿಲ್ಲ ಎಂದರು.

ನಮ್ಮದು ಒಂದು ಪ್ರಾದೇಶಿಕ ಪಕ್ಷ, ಬಿಜೆಪಿ ಜತೆ ನಮ್ಮ ಸಂಬಂಧವನ್ನು ಬೆಳೆಸಿಕೊಂಡಿದ್ದೇವೆ. ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿಗೂ ಆರೋಗ್ಯ ಸರಿ ಇರಲಿಲ್ಲ, ಈಗ ಸರಿ ಆಗಿದೆ. ಇಂದು ಬೆಳಗ್ಗೆ ಉಪಹಾರ ನನ್ನ ಜತೆ ಸೇವಿಸಿದ್ದಾರೆ. ಪಕ್ಷದ ಸಂಘಟನೆ ವಿಚಾರವಾಗಿಯೂ ಮಾತನಾಡಿದ್ದಾರೆ. ರಾಜ್ಯದ ಆಡಳಿತದ ಬಗ್ಗೆ ಪ್ರತಿನಿತ್ಯ ಪತ್ರಿಕೆ ಓದಿ ತಿಳಿದುಕೊಳ್ಳುತ್ತೇನೆ. ಕುಮಾರಣ್ಣನ ನಾಯಕತ್ವಕ್ಕೆ ಬಲ ತುಂಬಬೇಕಿದೆ, ಭಗವಂತ ಎಷ್ಟು ದಿನ ಆಯಸ್ಸು ಕೊಡ್ತಾನೋ ಗೊತ್ತಿಲ್ಲ. ಮುಂದಿನ ದಿನಗಳಲ್ಲಿ ನಾನು ರಾಜ್ಯ ಪ್ರವಾಸ ಮಾಡುತ್ತೇನೆ. ರಾಜ್ಯದ ಜನರು ಕುಮಾರಸ್ವಾಮಿ ನಾಯಕತ್ವಕ್ಕೆ ಶಕ್ತಿ ತುಂಬಬೇಕು. ನನ್ನ ಶಕ್ತಿ ಮೀರಿ ಅವರ ಕೈ ಬಲಪಡಿಸುತ್ತೇನೆ, ನಿಖಿಲ್ ಕುಮಾರಸ್ವಾಮಿ ನಾಯಕತ್ವದಲ್ಲಿ ಯುವಕರ ಗುಂಪಿನ ಜತೆ ಚರ್ಚೆ ಮಾಡುತ್ತೇನೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net