

ಜಗಳೂರು: ಏಷ್ಯಾದಲ್ಲಿಯೇ ಅಪರೂಪದ ಪ್ರಾಣಿ ಕೊಂಡುಕುರಿ ಜೀವ ಸಂಕುಲ ವಾಸವಿರುವ ರಂಗಯ್ಯನದುರ್ಗ ಅರಣ್ಯ ಪ್ರದೇಶವನ್ನು ಸಂರಕ್ಷಣೆ ಮಾಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಶಾಸಕ ಚಿಕ್ಕಮ್ಮನಹಟ್ಟಿ ಬಿ.ದೇವೇಂದ್ರಪ್ಪ ಹೇಳಿದರು.
ಪಟ್ಟಣದ ಎನ್‌ಎಂಕೆ ಶಾಲಾ ಆವರಣದಲ್ಲಿ ಸೋಮವಾರ ದಾವಣಗೆರೆ ಪ್ರಾದೇಶಿಕ ಅರಣ್ಯ ವಿಭಾಗ ಹಮ್ಮಿಕೊಂಡಿದ್ದ 70ನೇ ವನ್ಯಜೀವಿ ಸಪ್ತಾಹ ಆಚರಣೆಯ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ದೇಶದ ನೆಲ, ಜಲ, ಭೂಮಿ ವಿಷಯ ಬಂದಾಗ ಎಲ್ಲರೂ ಒಕ್ಕೊರಲಿನಿಂದ ಸಂರಕ್ಷಣೆ ಮಾಡುವ ಜವಾಬ್ದಾರಿ ನಮ್ಮ ಮೇಲಿರುತ್ತದೆ. ಪಟ್ಟಣದ ನಾಲ್ಕು ದಿಕ್ಕುಗಳಲ್ಲೂ ಕೊಂಡುಕುರಿ ನಾಮಫಲಕಗಳನ್ನು ಅಳವಡಿಸಬೇಕು. ಆಗ ಜನರಿಗೆ ಕೊಂಡುಕುರಿ ವಿಶೇಷತೆಯ ಬಗ್ಗೆ ತಿಳಿಯುತ್ತದೆ. ಪ್ರಕೃತಿಯನ್ನು ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿ ಎಂದರು.
ವನ್ಯಜೀವಿ ತಜ್ಞ ಸಂಜಯ್ ಗುಬ್ಬಿ ಮಾತನಾಡಿ, ನಾಲ್ಕು ಕೊಂಬುಗಳುಳ್ಳ ಪ್ರಪಂಚದ ಏಕೈಕ ಪ್ರಾಣಿ ಕೊಂಡುಕುರಿಯಾಗಿದೆ. ಇದು ಈ ಭಾಗದಲ್ಲಿರುವುದು ಜನರ ಸೌಭಾಗ್ಯವಾಗಿದೆ ಎಂದರು.
ಸಾಮಾಜಿಕ ವಲಯ ಉಪ ಸಂರಕ್ಷಣಾಧಿಕಾರಿ ಗೋಪ್ಯನಾಯ್ಕ ಪ್ರಾಸ್ತಾವಿಕ ಮಾತನಾಡಿ, ಪ್ರಕೃತಿ, ಕಾಡು ಮತ್ತು ವನ್ಯಪ್ರಾಣಿಗಳು ಜೀವನದ ಒಂದು ಅಂಗವಾಗಿವೆ. ಭೂಮಿ ಮೇಲಿನ ಕಾಡು, ಕಲ್ಲು, ಮಣ್ಣು, ನೀರು ಸೇರಿದಂತೆ ಎಲ್ಲವನೂ ್ನಮನಬಂದಂತೆ ಬಳಸುತ್ತಿದ್ದೇವೆ. ಇದರಿಂದ ಪ್ರಕೃತಿ ಮುನಿಸಿನಿಂದ ಸಾಕಷ್ಟು ಅನಾಹುತಗಳು ಸಂಭವಿಸುತ್ತಿವೆ ಎಂದರು.
ಜಿಪಂ ಮಾಜಿ ಸದಸ್ಯ ಕೆ.ಪಿ.ಪಾಲಯ್ಯ, ಆರೈಕೆ ಆಸ್ಪತ್ರೆ ಮುಖ್ಯಸ್ಥ ಡಾ.ಟಿ.ಜಿ.ರವಿಕುಮಾರ್, ಪತ್ರಕರ್ತ ಡಿ. ಶ್ರೀನಿವಾಸ್ ಮಾತನಾಡಿದರು. ಇದೇ ವೇಳೆ ಸಂಜಯ್ ಗುಬ್ಬಿ, ಡಾ. ಜಿ.ಟಿ. ರವಿಕುಮಾರ್, ಡಿ. ಶ್ರೀನಿವಾಸ್ ಅವರನ್ನು ಅರಣ್ಯ ಇಲಾಖೆಯಿಂದ ಸನ್ಮಾನಿಸಲಾಯಿತು.
ಪಟ್ಟಣ ಪಂಚಾಯಿತಿ ಅಧ್ಯಕ್ಷ ಕೆ.ಎಸ್. ನವೀನ್‌ಕುಮಾರ್, ತಹಸೀಲ್ದಾರ್ ಸೈಯದ್ ಕಲೀಂಉಲ್ಲಾ, ದಾವಣಗೆರೆ ಅಪರ ಜಿಲ್ಲಾಧಿಕಾರಿ ಪಿ.ಎನ್. ಲೋಕೇಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪ ನಿರ್ದೇಶಕ ರವಿಚಂದ್ರ, ಪ್ರಾದೇಶಿಕ ಅರಣ್ಯ ಇಲಾಖೆ ಉಪ ಸಂರಕ್ಷಣಾಧಿಕಾರಿ ಶಶೀಧರ್, ಎನ್.ಎಂ.ಹಾಲಸ್ವಾಮಿ, ಕೊಂಡುಕುರಿ ಅರಣ್ಯಾಧಿಕಾರಿ ಜ್ಯೋತಿ ಮೆಣಸಿನಕಾಯಿ, ವಕೀಲರ ಸಂಘದ ಅಧ್ಯಕ್ಷ ಟಿ. ಬಸವರಾಜ್, ಪಿಡಬ್ಲ್ಯುಡಿ ಎಇಇ ನಾಗರಾಜ್, ಜಿಪಂ ಎಇಇ ಶಿವಮೂರ್ತಿ, ವಲಯ ಸಹಾಯಕ ಉಪ ಸಂರಕ್ಷಣಾಧಿಕಾರಿ ಭಾಗ್ಯಲಕ್ಷಿ ್ಮ, ಸಿಡಿಪಿಒ ಬೀರೇಂದ್ರಕುಮಾರ್, ಆರ್‌ವಿಎಸ್ ಶಾಲಾ ಮುಖ್ಯಸ್ಥ ಆರ್. ವೀರೇಶ್ ಮತ್ತಿತರರಿದ್ದರು.
ಆಕರ್ಷಿಸಿದ ಕೊಂಡುಕುರಿ ಸ್ತಬ್ದಚಿತ್ರ ಮೆರವಣಿಗೆ: ಪಟ್ಟಣದ ಗ್ರಾಮದೇವತೆ ದೊಡ್ಡ ಮಾರಿಕಾಂಬ ದೇವಸ್ಥಾನದ ಆವರಣದಲ್ಲಿ ವನ್ಯಜೀವಿ ಸಪ್ತಾಹ ಜಾಥಾಕ್ಕೆ ಶಾಸಕ ಚಿಕ್ಕಮ್ಮನಹಟ್ಟಿ ಬಿ.ದೇವೇಂದ್ರಪ್ಪ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು.
ಹೊರಕೆರೆ, ಹಳೇ ತಾಲೂಕು ಕಚೇರಿ ರಸ್ತೆ, ಮಹಾತ್ಮಗಾಂಧಿ ಹಳೇ ವೃತ್ತ, ದಾವಣಗೆರೆ ರಸ್ತೆ, ತಾಲೂಕು ಕಚೇರಿ ರಸ್ತೆ ಮತ್ತಿತರ ಕಡೆ ಜಾಗೃತಿ ಮೂಡಿಸಲಾಯಿತು. ಗೊಂಬೆಕುಣಿತ, ಸಮಾಳ ಮತ್ತಿತರ ಕಲಾತಂಡಗಳು ಮೆರವಣಿಗೆಗೆ ಮೆರುಗು ನೀಡಿದವು.
ಅದರಲ್ಲೂ ರಂಗಯ್ಯನದುರ್ಗ ಅರಣ್ಯ ಪ್ರದೇಶ, ಅಪರೂಪ ವನ್ಯಜೀವಿ ಕೊಂಡುಕುರಿ ಮತ್ತಿತರ ಸ್ತಬ್ದಚಿತ್ರಗಳು ಎಲ್ಲರನ್ನೂ ಆಕರ್ಷಿಸಿದವು. ದಾರಿಯುದ್ದಕೂ ಪರಿಸರ ಪ್ರೇಮಿಗಳು, ಸಾರ್ವಜನಿಕರು ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು.
ಜಗಳೂರಿನಲ್ಲಿ ವನ್ಯಜೀವಿ ಸಪ್ತಾಹದ ಜಾಗೃತಿ ಜಾಥಾಕ್ಕೆ ಶಾಸಕ ಚಿಕ್ಕಮ್ಮನಹಟ್ಟಿ ಬಿ.ದೇವೇಂದ್ರಪ್ಪ, ಸಿವಿಲ್ ನ್ಯಾಯಾಧೀಶ ಆರ್.ಚೇತನ್ ಚಾಲನೆ ನೀಡಿದರು. ಸಂಜಯ್ ಗುಬ್ಬಿ, ಗೋಪ್ಯನಾಯ್ಕ, ಡಾ. ಜಿ.ಟಿ. ರವಿಕುಮಾರ್, ಡಿ. ಶ್ರೀನಿವಾಸ್, ಪಪಂ ಅಧ್ಯಕ್ಷ ಕೆ.ಎಸ್. ನವೀನ್‌ಕುಮಾರ್, ತಹಸೀಲ್ದಾರ್ ಸೈಯದ್ ಕಲೀಂಉಲ್ಲಾ, ಎಡಿಸಿ ಪಿ.ಎನ್ ಲೋಕೇಶ್ ಇದ್ದರು.
(ಚಿತ್ರ-1ಎ ಜೆಎಲ್‌ಆರ್ ವನ್ಯ ಜೀವಿ ಸಪ್ತಾಹ ಸಮಾರೋಪ ಸಮಾರಂಭ ಅ.7)
ಜಗಳೂರಿನಲ್ಲಿ ಸೋಮವಾರ ವನ್ಯಜೀವಿ ತಜ್ಞ ಸಂಜಯ್ ಗುಬ್ಬಿ, ಡಾ. ಜಿ.ಟಿ.ರವಿಕುಮಾರ್, ಡಿ. ಶ್ರೀನಿವಾಸ್ ಅವರನ್ನು ಅರಣ್ಯ ಇಲಾಖೆಯಿಂದ ಸನ್ಮಾನಿಸಲಾಯಿತು. ಶಾಸಕ ಚಿಕ್ಕಮ್ಮನಹಟ್ಟಿ ಬಿ.ದೇವೇಂದ್ರಪ್ಪ, ಗೋಪ್ಯನಾಯ್ಕ, ಕೆ.ಎಸ್ ನವೀನ್‌ಕುಮಾರ್, ಸೈಯದ್ ಕಲೀಂಉಲ್ಲಾ, ಪಿ.ಎನ್. ಲೋಕೇಶ್ ಇದ್ದರು.
(ಚಿತ್ರ-1ಬಿ ಜೆಎಲ್‌ಆರ್ ವನ್ಯ ಜೀವಿ ಸಪ್ತಾಹ ಸಮಾರೋಪ ಸಮಾರಂಭ ಅ.7)
ಜಗಳೂರಿನಲ್ಲಿ 70ನೇ ವನ್ಯಜೀವಿ ಸಪ್ತಾಹದ ಜಾಗೃತಿ ಜಾಥಾದಲ್ಲಿ ಗಮನ ಸೆಳೆದ ಕೊಂಡುಕುರಿ ಸ್ತಬ್ದಚಿತ್ರ.
ಚಿತ್ರ-1ಸಿ ಜೆಎಲ್‌ಆರ್ ವನ್ಯ ಜೀವಿ ಸಪ್ತಾಹ ಸಮಾರೋಪ ಸಮಾರಂಭ ಅ.7)
ಜಗಳೂರಿನಲ್ಲಿ ವನ್ಯಜೀವಿ ಸಪ್ತಾಹದ ಜಾಗೃತಿ ಜಾಥಾದ ಮೆರವಣಿಗೆಯಲ್ಲಿ ಗೊಂಬೆಕುಣಿತ ಝಲಕ್.