ಊರೊಳಗೆ ಕಾಡಾನೆಗಳ ಓಡಾಡ

3blrp5
Published on


ಬೇಲೂರು : ತಾಲೂಕಿನ ಮಲೆನಾಡು ಭಾಗದಲ್ಲಿ ಬಿಡು ಬಿಟ್ಟಿದ್ದ ಕಾಡಾನೆಗಳ ಹಿಂಡಿನ ಉಪಟಳ ದಿನದಿಂದ ದಿನಕ್ಕೆ ಹೆಚ್ಚಾಗತೊಡಗಿದ್ದು, ತೋಟದೊಳಗಿರುತ್ತಿದ್ದ ಕಾಡಾನೆಗಳು ಊರೋಳಗೆ ರಾಜಾ ರೋಷವಾಗಿ ಓಡಾಡುವ ಮೂಲಕ ಆತಂಕ ಸೃಷ್ಠಿಸಿದೆ. ಆದಷ್ಟು ಬೇಗ ಕಾಡಾನೆಗಳನ್ನು ಒಡಿಸುವಂತೆ ಬಿಕ್ಕೋಡು ಗ್ರಾಮಸ್ಥರು ಆಗ್ರಹಿಸಿದ್ದಾರೆ.


ಕಾಡಾನೆಗಳ ಹಿಂಡಿನಿಂದ ಬೇರಾಗಿರುವ ಬೃಹತ್ ಸಲಗವೊಂದು ಕೆಳ್ಳಬಿಕ್ಕೋಡು ಗ್ರಾಮದ ಬೀದಿಗಳಲ್ಲಿ ಹಗಲಿನಲ್ಲೇ ಕಾಣಿಸಿಕೊಂಡಿದ್ದಲ್ಲದೆ, ಮನೆಗಳ ಸಮೀಪವೇ ನಿಂತು ಮುಂದೆ ಸಾಗುತಿತ್ತು. ಇದರಿಂದ ಮನೆಯಿಂದ ಹೊರ ಬರಲು ಜನರು ಭಯ ಪಡುತ್ತಿದ್ದಾರೆ. ಅಲ್ಲದೆ ಒಂದೇ ಗುಂಪಿನಲ್ಲಿದ್ದ ಆನೆಗಳೆಲ್ಲ ಎರಡು ದಿನಗಳಿಂದ ಬೇರೆ ಬೇರೆಯಾಗಿರುವುದು ಹಾಗೂ ಯಾವ ಸಂದರ್ಭ ಎಲ್ಲಿ ಕಾಣಿಸಿ ಕೊಳ್ಳುತ್ತವೆಯೋ ಎಂದು ಆತಂಕ ಗೊಂಡಿದ್ದಾರೆ.


ಮತ್ತೊಂದೆಡೆ ಕಾಡಾನೆಗಳ ಹಿಂಡಿನಲ್ಲಿರುವ ಎರಡು ಮರಿಗಳು ಕೆಳ್ಳ ಬಿಕ್ಕೋಡು ಸಮೀಪದ ಗದ್ದೆಯಲ್ಲಿನ ತೇವವಾದ ಕೆಸರು ಮಣ್ಣಿನಲ್ಲಿ ಒಂದಕ್ಕೊಂದು ಕೆಸರೆರಚಾಟದಲ್ಲಿ ತೊಡಗಿದ್ದವು. ಆದರೆ ಕಾಡಾನೆಗಳ ಚಲನವಲನ ಗಮನಿಸುತ್ತಿರುವ ಇಟಿಎಫ್ ಸಿಬ್ಬಂದಿ ಕೆಲಸ ಸಮಯದ ನಂತರ ಪಠಾಕಿ ಸಿಡಿಸಿದ್ದರಿಂದ ತೋಟದೊಳಕ್ಕೆ ಸೇರಿಕೊಂಡಿವೆ. ಆಗಿಂದಾಗ್ಗೆ ಗ್ರಾಮದೊಳಕ್ಕೆ ಬರುತ್ತಿರುವುದರಿಂದ ಭಯ ಭೀತರಾಗಿರುವ ಗ್ರಾಮಸ್ಥರು ಮೊದಲು ಕಾಡಾನೆಗಳನ್ನು ಓಡಿಸುವಂತೆ ಒತ್ತಾಯಿಸುತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net