

ಬೆಳ್ತಂಗಡಿ: ಕಡಿರುದ್ಯಾವರ ಗ್ರಾಮದ ಹಲವು ಕಡೆ ಒಂಟಿ ಸಲಗ ತೋಟಗಳಿಗೆ ದಾಳಿ ನಡೆಸಿ ಕೃಷಿಗೆ ಹಾನಿಗೈದಿದೆ.
ಭಾನುವಾರ ತಡರಾತ್ರಿ ಇಲ್ಲಿನ ಬಸವದಡ್ಡು ಶಂಕರ್ ಭಟ್, ನಡ್ತಂಡ ಮಹೇಶ್ ಭಟ್, ನೀಲಯ್ಯ ಗೌಡ, ಪ್ರವೀಣ್ ಗೌಡ ಮೊದಲಾದವರ ತೋಟಗಳಿಗೆ ನುಗ್ಗಿದ ಸಲಗ ಅಡಕೆ, ಬಾಳೆ ಗಿಡಗಳನ್ನು ಮುರಿದು ಹಾಕಿದೆ. ರಾಮಚಂದ್ರ ಗೌಡ ಎಂಬುವರ ಸಾಕು ನಾಯಿ ಆನೆ ಬಳಿ ಬೊಗಳುತ್ತಾ ಹೋಗಿದ್ದು, ಈ ಸಮಯ ಆನೆ ಅವರ ಮನೆ ತನಕ ನಾಯಿಯನ್ನು ಓಡಿಸಿದ್ದು, ಅಂಗಳದಲ್ಲೇ ನಿಂತು ಘೀಳಿಟ್ಟಿದೆ.