

ಸೋಮವಾರಪೇಟೆ: ತಾಲೂಕಿನ ಹಲವೆಡೆ ಕಾಡಾನೆಗಳ ಹಾವಳಿ ಮುಂದುವರಿದಿದ್ದು, ಸೋಮವಾರ ರಾತ್ರಿ ಹಾನಗಲ್ಲು ಗ್ರಾಮದಲ್ಲಿ ಕಾಫಿ ತೋಟಕ್ಕೆ ನುಗ್ಗಿ ಬೆಳೆ ಹಾನಿಪಡಿಸಿವೆ.
ಸುದರ್ಶನ್ ಕೌಶಿಕ್, ಎಚ್.ಆರ್.ನವೀನ್, ಎಚ್.ಎಂ.ಬಸಪ್ಪ ಅವರ ಕಾಫಿ ತೋಟಕ್ಕೆ ನುಗ್ಗಿದ ಕಾಡಾನೆಗಳು, ಕಾಫಿ ಗಿಡಗಳನ್ನು ತುಳಿದು ನಾಶಪಡಿಸಿವೆ. ಬಾಳೆಗಿಡಗಳನ್ನು ಮುರಿದು ತಿಂದಿವೆ. ಕಾಡಾನೆ ಹಾವಳಿ ನಿಯಂತ್ರಣಕ್ಕೆ ಅರಣ್ಯ ಇಲಾಖೆ ಶಾಶ್ವತ ಪರಿಹಾರ ಕಲ್ಪಿಸಬೇಕು ಬೆಳೆಗಾರರು ಒತ್ತಾಯಿಸಿದರು.