ಕೃಷಿ ಭೂಮಿಗೆ ಒಂಟಿ ಸಲಗ ದಾಳಿ

elephant attack
Published on


ಬೆಳ್ತಂಗಡಿ: ನೆರಿಯ ಗ್ರಾಮದ ಕುವೆತ್ತಿಲ್ ಎಂಬಲ್ಲಿ ಶುಕ್ರವಾರ ತಡರಾತ್ರಿ ಕೃಷಿ ತೋಟಗಳಿಗೆ ಒಂಟಿ ಸಲಗ ದಾಳಿ ನಡೆಸಿ ಕೃಷಿ ಹಾನಿ ಉಂಟು ಮಾಡಿದೆ.

ಇಲ್ಲಿನ ರಾಮ್ ಕುಮಾರ್ ಎಂಬುವರ ತೋಟಕ್ಕೆ ಕಳೆದ ಎರಡು ತಿಂಗಳಲ್ಲಿ ಮೂರನೇ ಬಾರಿ ದಾಳಿ ನಡೆಸಿದ ಒಂಟಿ ಸಲಗ ಬಾಳೆ ಕೃಷಿ ಹಾಗೂ ಅಡಕೆ ಕೃಷಿಗೆ ಹಾನಿ ಮಾಡಿದೆ.

ಸಮೀಪದ ಅಶೋಕ ಎಂಬವರ 30ರಷ್ಟು ಫಲಬಿಟ್ಟ ನೇಂದ್ರಬಾಳೆ ಕೃಷಿ ಆನೆದಾಳಿಗೆ ತುತ್ತಾಗಿದೆ. ಆನೆ ತೋಟಕ್ಕೆ ನುಗ್ಗಿರುವ ವಿಚಾರ ಸ್ಥಳೀಯರ ಗಮನಕ್ಕೆ ಬರುತ್ತಿದ್ದಂತೆ ಪಟಾಕಿ ಸಿಡಿಸಿ ಓಡಿಸಿದ ಕಾರಣ ಹೆಚ್ಚಿನ ಹಾನಿ ತಪ್ಪಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net