ಉಡುತೊರೆ ಜಲಾಶಯದ ಬಳಿ ಕಾಡಾನೆ ಹಿಂಡು ಪ್ರತ್ಯಕ್ಷ

02 HANUR 3
ಕಾಂಚಳ್ಳಿ ಸಮೀಪದ ಉಡುತೊರೆ ಜಲಾಶಯದ ಹಿನ್ನೀರಿನ ಬಳಿ ಕಾಣಿಸಿಕೊಂಡ ಕಾಡಾನೆಗಳ ಹಿಂಡು.
Published on

ಹನೂರು: ತಾಲೂಕಿನ ಕಾಂಚಳ್ಳಿ ಸಮೀಪದ ಉಡುತೊರೆ ಜಲಾಶಯದ ಹಿನ್ನೀರಿನ ಬಳಿ ಭಾನುವಾರ ಕಾಡಾನೆಗಳ ಹಿಂಡು ನೀರು ಕುಡಿಯುವ ವೇಳೆ ಕಾಣಿಸಿಕೊಂಡಿದ್ದು, ರೈತರಲ್ಲಿ ಆತಂಕವನ್ನು ಉಂಟು ಮಾಡಿದೆ.

ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಂತಿರುವ ಕಾಂಚಳ್ಳಿ ಹಾಗೂ ಅಜ್ಜೀಪುರ ಗ್ರಾಮದ ಜಮೀನುಗಳಿಗೆ ಕೆಲ ದಿನಗಳ ಹಿಂದೆ ಕಾಡಾನೆಗಳು ಲಗ್ಗೆ ಇಟ್ಟು ಫಸಲನ್ನು ನಾಶಪಡಿಸಿದ್ದವು. ಈ ಬಗ್ಗೆ ರೈತರು ಆಕ್ಷೇಪ ವ್ಯಕ್ತಪಡಿಸಿ ಕಾಡಾನೆಗಳು ಜಮೀನಿಗೆ ಲಗ್ಗೆ ಇಡದಂತೆ ಕಡಿವಾಣ ಹಾಕುವಂತೆ ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದರು. ಆದರೆ ಬೆಳಗ್ಗೆ ಜಲಾಶಯದ ಹಿನ್ನೀರಿನಲ್ಲಿ 6 ಕಾಡಾನೆಗಳ ಹಿಂಡು ನೀರು ಕುಡಿಯುತ್ತಿದ್ದ ವೇಳೆ ಕಾಣಿಸಿಕೊಂಡಿದ್ದು, ಆಸುಪಾಸಿನಲ್ಲೇ ಬೀಡು ಬಿಟ್ಟಿದ್ದವು. ಹಾಗಾಗಿ ಇದರ ಸಮೀಪದಲ್ಲಿ ಜಮೀನಿನನ್ನು ಹೊಂದಿರುವ ರೈತರು ಮತ್ತೇ ಜಮೀನಿಗೆ ಲಗ್ಗೆ ಹಾಕಬಹುದು ಎಂಬ ಆತಂಕಕ್ಕೆ ಒಳಗಾಗಿದ್ದು, ಆನೆಗಳನ್ನು ಅರಣ್ಯ ಪ್ರದೇಶದೊಳಗೆ ಓಡಿಸುವಂತೆ ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net