ಸುಬ್ರಹ್ಮಣ್ಯದಲ್ಲಿ ಕಾಡಾನೆ ದಾಳಿಗೆ ಕೃಷಿಕ ಸಾವು

elephan attack
Published on

ಸುಬ್ರಹ್ಮಣ್ಯ: ಇಲ್ಲಿನ ಕಲ್ಮಕಾರು ಎಂಬಲ್ಲಿ ಬುಧವಾರ ಕಾಡಾನೆ ದಾಳಿಯಿಂದ ಕಲ್ಮಕಾರಿನ ಮೆಂಟೆಕಜೆ ಶಿವರಾಮ ಗೌಡ(80) ಎಂಬುವರು ಮೃತಪಟ್ಟಿದ್ದಾರೆ.

ಶಿವರಾಮ ಗೌಡರ ಮನೆಗೆ ಸುಮಾರು ಅರ್ಧ ಕಿ.ಮೀ. ದೂರದ ಕಾಡಿನಿಂದ ಮನೆಗೆ ಪೈಪ್‌ನಲ್ಲಿ ನೀರು ಹರಿದು ಬರುತ್ತದೆ. ಬುಧವಾರ ಹಗಲು ಶಿವರಾಮ ಗೌಡರು ಪೈಪ್ ಸರಿ ಮಾಡಲೆಂದು ಹೋದ ಸಂದರ್ಭ ಕಾಡಾನೆ ದಾಳಿ ಮಾಡಿದೆ.

ಪೈಪ್ ಸರಿ ಮಾಡಲು ಹೋದ ಶಿವರಾಮರು ಮನೆಗೆ ಬಾರದಿರುವುದನ್ನು ಕಂಡು ಮನೆಯವರು ಹುಡುಕಾಡಿದಾಗ ಕಾಡಿನಲ್ಲಿ ಆನೆ ದಾಳಿಯಿಂದ ಗಾಯಗೊಂಡು ಬಿದ್ದಿರುವುದು ಪತ್ತೆಯಾಗಿತ್ತು. ಬಳಿಕ ಸುಳ್ಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಪತ್ನಿ, ಮೂವರು ಪುತ್ರರು, ಪುತ್ರಿಯನ್ನು ಅಗಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net