ಸಲಗ ದಾಳಿ, ಕೃಷಿ ನಾಶ

New Project (29)
Published on

ಸುಳ್ಯ: ತಾಲೂಕಿನ ಮಂಡೆಕೋಲು ಗ್ರಾಮದಲ್ಲಿ ಮತ್ತೆ ಕಾಡಾನೆಗಳ ಉಪಟಳ ಮುಂದುವರಿದಿದ್ದು, ಗುರುವಾರ ಸಂಜೆಯ ವೇಳೆಯೇ ಪೆರ್ದೋಡಿ ಶಿಬರೂರಾಯರ ತೋಟಕ್ಕೆ ಮೂರು ಆನೆಗಳು ನುಗ್ಗಿ ಬೆಳೆ ನಾಶಗೈದಿವೆ.

ಸಂಜೆಯ ವೇಳೆಗೆ ಈ ಗ್ರಾಮದ ಕಾಡಂಚಿನಲ್ಲಿದ್ದ ಕೃಷಿ ತೋಟಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಆನೆಗಳ ಘೀಳಿಡುವಿಕೆ ಸಾವಾನ್ಯವಾಗಿದ್ದು, ಗುರುವಾರ ಸಂಜೆಯ ವೇಳೆಗೆ ಪೆರ್ದೋಡಿ ಸಮೀಪದ ಕಾಡಿನಲ್ಲಿ ಅನೆಗಳ ಇರುವಿಕೆ ಕಂಡುಬಂದಿದೆ. ಸ್ವಲ್ಪ ಹೊತ್ತಿನಲ್ಲಿಯೇ ಮೂರು ಆನೆಗಳು ನಾರಾಯಣ ಶಿಬರೂರಾಯರ ತೋಟಕ್ಕೆ ನುಗ್ಗಿ ಹಾನಿ ಮಾಡಿವೆ. ಬೊಬ್ಬೆ ಹಾಕಿ ಗದರಿದರೂ ಆನೆಗಳು ಇಟ್ಟ ಹೆಜ್ಜೆ ಸರಿಸದೆ ಅಡಕೆ ಮರಗಳನ್ನು ಪುಡಿಗೈದಿವೆ ಎಂದು ಪೆರ್ದೋಡಿಯ ನಾರಾಯಣ ಶಿಬರೂರಾಯರು ಮಾಹಿತಿ ನೀಡಿದ್ದಾರೆ.

ಬುಧವಾರ ಇದೇ ಗ್ರಾಮದ ಎರ್ಕಲ್ಪಾಡಿ ಹಾಗೂ ಮುರೂರು ಕಾಪಿನಡ್ಕದ ರಾಮಕೃಷ್ಣ ರಾವ್ ತೋಟಕ್ಕೆ ನುಗ್ಗಿ ಬೆಳೆ ಹಾನಿಗೈದಿದ್ದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net