ಮುಂದುವರಿದ ಕಾಡಾನೆ ದಾಂಧಲೆ

New Project (4)
Published on

ಪುತ್ತೂರು ಗ್ರಾಮಾಂತರ: ನೆಟ್ಟಣಿಗೆ ಮುಡ್ನೂರು ಗ್ರಾಮದ ಪೆರ್ನಾಜೆ ಮತ್ತು ಮಾಡ್ನೂರು ಗ್ರಾಮದ ಅಮ್ಚಿನಡ್ಕ ವ್ಯಾಪ್ತಿಯಲ್ಲಿ ಅಪಾರ ಕೃಷಿ ಹಾನಿ ಮಾಡಿದ್ದ ಕಾಡಾನೆಗಳು ಬುಧವಾರ ರಾತ್ರಿ ನೂಜಿಬೈಲು ಪರಿಸರಕ್ಕೆ ಕಾಲಿಟ್ಟು ಕೃಷಿ ಹಾನಿ, ದಾಂಧಲೆ ಮುಂದುವರಿಸಿವೆ.

ಪೆರ್ನಾಜೆ-ಅಲೆಪ್ಪಾಡಿ ರಸ್ತೆಯ ಮೂಲಕವಾಗಿ ಬುಧವಾರ ರಾತ್ರಿ ಕಾಡಾನೆಗಳು ನೂಜಿಬೈಲು ಪರಿಸರಕ್ಕೆ ಕಾಲಿಟ್ಟಿದ್ದು, ಪೆರ್ನಾಜೆ-ಮಾಡನ್ನೂರು ರಸ್ತೆಯಲ್ಲಿ ಜೀಪಿನಲ್ಲಿ ತೆರಳುತ್ತಿದ್ದ ವ್ಯಕ್ತಿಯೊಬ್ಬರು ಕಾಡಾನೆಗಳೆರಡು ರಸ್ತೆ ದಾಟುತ್ತಿರುವುದನ್ನು ಕಂಡಿದ್ದಾರೆ.

ನೆಟ್ಟಣಿಗೆ ಮುಡ್ನೂರು ಗ್ರಾಮದ ನೂಜಿಬೈಲು ನಿವಾಸಿ ಅಶೋಕ್ ರೈ ಅವರ ಜಾಗದ ಅಗಲನ್ನು ಎರಡು ಕಡೆಗಳಲ್ಲಿ ಒಡೆದು ಒಳ ಪ್ರವೇಶಿಸಿದ್ದ ಕಾಡಾನೆಗಳು, ನೂಜಿಬೈಲು ಜಯಪ್ರಕಾಶ್ ರೈ, ನಾರಾಯಣ ರೈ ಅಂಕೋತ್ತಿಮಾರ್ ಅವರ ತೋಟಗಳಿಗೆ ಲಗ್ಗೆಯಿಟ್ಟು ಬಾಳೆಗಿಡಗಳನ್ನು ನಾಶ ಮಾಡಿ ಇತರ ಕೃಷಿಗಳಿಗೂ ಹಾನಿ ಮಾಡಿವೆ. ನೂಜಿಬೈಲಿನ ಮೋಹನ್‌ದಾಸ್ ಶೆಟ್ಟಿ ಅವರ ತೋಟದ ಮೂಲಕವಾಗಿ ಕೆಮ್ಮತ್ತಡ್ಕ, ಹೊಸಂಗಡಿ ಕಡೆಗೆ ಕಾಡಾನೆಗಳು ಪಯಣ ಮುಂದುವರಿಸಿರುವುದಾಗಿ ಮಾಹಿತಿ ಲಭಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net