ಸುಬ್ರಹ್ಮಣ್ಯದಲ್ಲಿ ಆನೆದಾಳಿಗೆ ಕೃಷಿ ನಾಶ

aane
Published on

ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯದ ಅರ್ಗುಡಿ, ಕಲ್ಲಗದ್ದೆ, ಅಗರಿಕಜೆ ಮತ್ತು ದೇವರಗದ್ದೆಯ ಕೃಷಿ ತೋಟಗಳಿಗೆ ಶುಕ್ರವಾರ ಆನೆಗಳ ಹಿಂಡು ದಾಳಿ ನಡೆಸಿ ಕೃಷಿ ನಾಶಗೈದಿವೆ.

ಕಲ್ಲಗದ್ದೆಯ ದಿ.ಮಹಾಲಿಂಗ ಮೂಲ್ಯ ಅವರ ಕೃಷಿ ತೋಟಕ್ಕೆ ನುಗ್ಗಿದ ಕಾಡಾನೆಗಳು 50ಕ್ಕೂ ಅಧಿಕ ಬಾಳೆಗಿಡ, 5 ತೆಂಗಿನಮರಗಳನ್ನು ಮತ್ತು ಅಡಕೆ ಗಿಡಗಳನ್ನು ದ್ವಂಸ ಮಾಡಿದೆ. ನೀರಾವರಿಗೆ ಅಳವಡಿಸಿದ್ದ ಪೈಪ್‌ಲೈನ್‌ಗಳು ಆನೆಗಳ ತುಳಿತಕ್ಕೆ ಸಿಕ್ಕಿ ನಾಶವಾಗಿದೆ. ಅಗರಿಕಜೆಯ ಕೃಷಿಕ ಶಿವರಾಮ ರೈ ಅವರ ಕೃಷಿ ತೋಟಕ್ಕೆ ದಾಳಿ ಮಾಡಿ ತೋಟಕ್ಕೆ ಅಳವಡಿಸಿದ್ದ ಕಬ್ಬಿಣದ ಗೇಟನ್ನು ಧ್ವಂಸ ಮಾಡಿದ್ದಲ್ಲದೆ ಆವರಣ ಗೋಡೆಯನ್ನು ಕೆಡವಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net