

ಸುಳ್ಯ: ತಾಲೂಕಿನ ಮಂಡೆಕೋಲು ಗ್ರಾಮದ ಮಾವಂಜಿ, ಹೊಸೊಕ್ಲು ಎಂಬಲ್ಲಿಗೆ ಕಾಡಾನೆಗಳು ನುಗ್ಗಿ ಕೃಷಿ ಬೆಳೆಗಳನ್ನು ಧ್ವಂಸಗೈದ ಘಟನೆ ಶನಿವಾರ ರಾತ್ರಿ ನಡೆದಿದೆ. ಕಾಡಾನೆಗಳು ಹೊಸೊಕ್ಲು ಕೊರಗಪ್ಪ ಗೌಡರ ತೋಟಕ್ಕೆ ನುಗ್ಗಿ ಅಡಕೆ, ಬಾಳೆಗಿಡಗಳನ್ನು ಪುಡಿಗೈದಿವೆ. ಕೆಲ ದಿನಗಳ ಹಿಂದೆ ಕಾಡಾನೆಗಳು ಇದೇ ತೋಟಕ್ಕೆ ನುಗ್ಗಿ ಬೆಳೆ ನಾಶಗೊಳಿಸಿದ್ದವು.