

ಸುಳ್ಯ: ತಾಲೂಕಿನ ಅರಂತೋಡು ಗ್ರಾಮದ ಅಡ್ಕಬಳೆ ಎಂಬಲ್ಲಿ ಕೃಷಿ ತೋಟಗಳಿಗೆ ಕಾಡಾನೆಗಳು ನುಗ್ಗಿ ಪುಡಿಗೈದ ಘಟನೆ ಗುರುವಾರ ರಾತ್ರಿ ನಡೆದಿದೆ.
ಅಡ್ಕಬಳೆಯ ಗಂಗಾಧರ ಗೌಡ ಹಾಗೂ ಲೀಲಾವತಿ ಎಂಬುವರ ತೋಟಕ್ಕೆ ನುಗ್ಗಿದ ಕಾಡಾನೆಗಳ ಹಿಂಡು ತೆಂಗು, ಅಡಕೆ ಹಾಗೂ ಬಾಳೆಗಿಡಗಳನ್ನು ಧ್ವಂಸಗೈದಿವೆ. ಕೆಲ ದಿನಗಳ ಹಿಂದೆ ಪರಿವಾರಕಾನದಲ್ಲಿದ್ದ ಹಿಂಡು ಇದೀಗ ಅರಂತೋಡು ಕಾಡಿನಲ್ಲಿ ಬೀಡುಬಿಟ್ಟಿದ್ದು, ರಾತ್ರಿಯಾಗುತ್ತಲೇ ಕೃಷಿಕರ ತೋಟಕ್ಕೆ ನುಗ್ಗಿ ಬೆಳೆಗಳನ್ನು ಹಾನಿಗೈಯುತ್ತಿದೆ.