

ಸಕಲೇಶಪುರ: ತಾಲೂಕಿನ ಶಾಂತಪುರ ಗ್ರಾಮದಲ್ಲಿನ ವೃದ್ಧ್ದ ದಂಪತಿ ಮನೆಯ ಮುಂದೆ ಕಾಡಾನೆಯೊಂದು ಭಾನುವಾರ ರಾತ್ರಿ ಬಂದು ಆತಂಕ ಸೃಷ್ಟಿಸಿತ್ತು.
ರಾಜಯ್ಯ ಎಂಬುವರ ಮನೆಗೆ ರಾತ್ರಿ ಬಂದ ಕಾಡಾನೆ ಮನೆಯ ಬಾಗಿಲ ಬಳಿ ಬಂದು ಅರ್ಧಗಂಟೆಗೂ ಹೆಚ್ಚುಕಾಲ ಓಡಾಡಿದೆ. ಕಿಟಕಿಯ ಮಧ್ಯೆ ಸೊಂಡಿಲನ್ನು ಹಾಕುವ ಪ್ರಯತ್ನ ಮಾಡಿದೆ. ಬಳಿಕ ಮನೆಯ ಬಾಗಿಲನ್ನು ತೆರೆಯುಲು ಸಾಧ್ಯವಾಗದೆ ಸುಮ್ಮನಾಗಿದೆ. ಆನೆ ಮನೆ ಮುಂದೆ ಬಂದಿರುವುದು ಮನೆಯಲ್ಲಿದ್ದ ವೃದ್ಧ್ದ ದಂಪತಿಗೂ ತಿಳಿದಿಲ್ಲ. ಸ್ನೇಹಿತನ ಮನೆಗೆ ಹೋಗಿದ್ದ ಮಗ ತನ್ನ ಮೊಬೈಲ್‌ನಲ್ಲಿ ಸಿಸಿಟಿವಿ ದೃಶ್ಯಾವಳಿ ನೋಡಿ ಭಯಗೊಂಡಿದ್ದಾನೆ. ತಕ್ಷಣ ತಂದೆಗೆ ಕರೆ ಮಾಡಿ, ಮನೆಯಿಂದ ಯಾವುದೇ ಕಾರಣಕ್ಕೂ ಹೊರಗೆ ಬರಬೇಡಿ ಎಂದು ತಿಳಿಸಿದ್ದಾನೆ. ಅಲ್ಲದೆ ಸಿಸಿಟಿವಿ ದೃಶ್ಯಾವಳಿಯನ್ನು ನೋಡುತ್ತಾ, ತಂದೆ-ತಾಯಿಗೆ ಮಾಹಿತಿ ರವಾನಿಸಿದ್ದಾರೆ. ಹೀಗಾಗಿ ಭಯದಲ್ಲೇ ರಾತ್ರಿ ಕಳೆದಿದ್ದಾರೆ. ಸ್ಥಳಕ್ಕೆ ಆರ್‌ಎಫ್‌ಒ ಹೇಮಂತ್ ಕುಮಾರ್ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.