

ಗಂಗಾವತಿ: ವಿಶ್ವ ಆನೆಗಳ ದಿನಾಚರಣೆ ನಿಮಿತ್ತ ನಗರದ ಲಿಟಲ್ ಹಾರ್ಟ್ಸ್ ಶಾಲೆಯಲ್ಲಿ ಮಕ್ಕಳಿಗಾಗಿ ಆನೆ ಚಿತ್ರ ಬರೆಯುವ ಚಿತ್ರಕಲಾ ಸ್ಪರ್ಧೆ ಶನಿವಾರ ಹಮ್ಮಿಕೊಳ್ಳಲಾಗಿತ್ತು.
ಇನ್ನರ್ ವ್ಹೀಲ್ ಕ್ಲಬ್ ತಾಲೂಕು ಘಟಕದಿಂದ ಹಮ್ಮಿಕೊಂಡಿದ್ದ ಸ್ಪರ್ಧೆಯಲ್ಲಿ ವಿವಿಧ ಶಾಲೆಯ 6 ಮತ್ತು 7ನೇ ತರಗತಿಯ 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಕ್ಲಬ್ ತಾಲೂಕಾಧ್ಯಕ್ಷೆ ಎಂ.ಪ್ರಿಯಾಕುಮಾರಿ ಮಾತನಾಡಿ, ವೈವಿಧ್ಯಮಯ ವನ್ಯ ಜೀವಿಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಲು ಸ್ಪರ್ಧೆ ಆಯೋಜಿಸಲಾಗಿದೆ ಎಂದರು.
ಗೋಣಿಚೀಲ ಮತ್ತು ಪ್ಲಾಸ್ಟರ್ ಆ್ ಪ್ಯಾರೀಸ್‌ನಿಂದ ಬೃಹತ್ ಆನೆ ನಿರ್ಮಿಸಿದ ಲಿಟಲ್ ಹಾರ್ಟ್ಸ್ ಶಾಲೆ ಚಿತ್ರಕಲಾ ಶಿಕ್ಷಕಿ ಯಶೋಧಾ ಪತ್ತಾರ್‌ರನ್ನು ಸನ್ಮಾನಿಸಲಾಯಿತು.
ಟೈಲ್ಸ್ ಕಾರ್ಮಿಕ ಸಂತೋಷ ಕುಟುಂಬದ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಕ್ಲಬ್ ಸದಸ್ಯೆ ಸುಜಾತರೆಡ್ಡಿ 25,000 ರೂ. ಧನಸಹಾಯ ನೀಡಿದರು. ಕ್ಲಬ್‌ನ ಖಜಾಂಚಿ ಮಂಜುಳಾ ಸಿಂಗನಾಳ್, ಸದಸ್ಯೆ ರಜನಿ ಜಗನ್ನಾಥ ಆಲಂಪಲ್ಲಿ ಇದ್ದರು.