ಅಪರಿಚಿತ ವಾಹನ ಡಿಕ್ಕಿಯಾಗಿ ಕಾಡು ಬೆಕ್ಕು ಮೃತ

ಅಜ್ಜೀಪುರ ಮಾರ್ಗದಲ್ಲಿ ಅಪರಿಚಿತ ವಾಹನ ಡಿಕ್ಕಿಯಿಂದ ಕಾಡುಬೆಕ್ಕು ಮೃತಪಟ್ಟಿರುವುದು.
ಅಜ್ಜೀಪುರ ಮಾರ್ಗದಲ್ಲಿ ಅಪರಿಚಿತ ವಾಹನ ಡಿಕ್ಕಿಯಿಂದ ಕಾಡುಬೆಕ್ಕು ಮೃತಪಟ್ಟಿರುವುದು.
Published on

ಹನೂರು: ಅಜ್ಜೀಪುರಕ್ಕೆ ತೆರಳುವ ಅರಣ್ಯ ಪ್ರದೇಶದ ಮಾರ್ಗದಲ್ಲಿ ಶುಕ್ರವಾರ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಅಪರೂಪದ ಕಾಡು ಬೆಕ್ಕು ಮೃತಪಟ್ಟಿದೆ.

ಅರಣ್ಯ ಪ್ರದೇಶದಿಂದ ಕೂಡಿರುವ ಈ ಮಾರ್ಗದಲ್ಲಿ ಕಾಡು ಬೆಕ್ಕೊಂದು ರಸ್ತೆ ದಾಟುತ್ತಿತ್ತು ಎನ್ನಲಾಗಿದೆ. ಈ ವೇಳೆ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದೆ. ಈ ಬಗ್ಗೆ ಸಾರ್ವಜನಿಕರು ಅರಣ್ಯ ಇಲಾಖೆಗೆ ಮಾಹಿತಿ ತಿಳಿಸಲಾಗಿ ಸ್ಥಳಕ್ಕಾಗಮಿಸಿ ಸಿಬ್ಬಂದಿ ಪರಿಶೀಲನೆ ನಡೆಸಿದರು.

ಈ ಅರಣ್ಯ ಪ್ರದೇಶದಲ್ಲಿ ಕಾಡು ಬೆಕ್ಕು ಇರುವುದು ಅಪರೂಪ. ಹಾಗಾಗಿ ಸಂರಕ್ಷಿಸಬೇಕಿರುವುದು ಎಲ್ಲರ ಕರ್ತವ್ಯ. ಆದರೆ ವಾಹನ ಡಿಕ್ಕಿಯಿಂದ ಬೆಕ್ಕು ಮೃತಪಟ್ಟಿರುವುದು ಬೇಸರದ ಸಂಗತಿ. ಅರಣ್ಯ ಇಲಾಖೆಯ ಅಧಿಕಾರಿಗಳು ನಿಗಾ ವಹಿಸಬೇಕು ಎಂದು ವನ್ಯಜೀವಿ ಪ್ರಿಯರು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net