

ಕಾಸರಗೋಡು: ಬೋವಿಕ್ಕಾನ-ಇರಿಯಣ್ಣಿ ರಸ್ತೆಯ ಮಂಜಕ್ಕಲ್ ಪ್ರದೇಶದಲ್ಲಿ ಹಗಲೇ ಕಾಡುಕೋಣಗಳ ಸಂಚಾರದಿಂದ ಈ ಪ್ರದೇಶದ ಜನತೆಗೆ ಆತಂಕ ಎದುರಾಗಿದೆ. ಭಾರಿ ಗಾತ್ರದ ಕಾಡುಕೋಣಗಳು ಈ ಪ್ರದೇಶದ ರಸ್ತೆಯಲ್ಲಿ ಸುತ್ತಾಡುತ್ತಿದ್ದು, ದ್ವಿಚಕ್ರ ಸೇರಿದಂತೆ ವಿವಿಧ ವಹನ ಪ್ರಯಾಣಿಕರಲ್ಲೂ ಭೀತಿಗೆ ಕಾರಣವಾಗುತ್ತಿದೆ. ಕಾಡುಕೋಣಗಳು ಕೆಲವೆಡೆ ಕೃಷಿಹಾನಿಯನ್ನೂ ಮಾಡಿವೆ. ಗುಂಪಾಗಿ ಆಗಮಿಸುವ ಕಾಡುಕೋಣಗಳು ದಾಳಿ ನಡೆಸುವ ಸಾಧ್ಯತೆಯಿರುವುದರಿಂದ ಜನತೆ ಜಾಗ್ರತೆ ಪಾಲಿಸುವಂತೆ ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.